ವಿಜಯಸಾಕ್ಷಿ ಸುದ್ದಿ, ಡಂಬಳ: ಹೋಬಳಿ ವ್ಯಾಪ್ತಿಯಲ್ಲಿ ಬರುವ ಡಂಬಳ ಹಾಗೂ ಡೋಣಿ ಗ್ರಾಮಗಳ ರೈತರ ಜಮೀನುಗಳ ಮಧ್ಯೆ ಹಾದು ಹೋಗಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆ ಕಾಲುವೆಯ ಅಕ್ಕಪಕ್ಕ ನೀರು ಬಸಿಯುವಿಕೆಯಿಂದ ಜಮೀನಿನಲ್ಲಿ ಹಾಕಿದ ವಿವಿಧ ಬೆಳೆಗಳು ಜವುಳಿನಿಂದಾಗಿ ಹಾನಿಗೊಳಗಾಗಿದ್ದು, ಜಮೀನುಗಳಿಗೆ ಮುಂಡರಗಿ ತಹಸೀಲ್ದಾರ ರ್ರಿಸ್ವಾಮಿ ಪಿ.ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಸಿಂಗಟಾಲೂರ ಏತನೀರಾವರಿ ಮೂಲಕ ಹರಿಯುವ ನೀರಿನ ಜವಳು ಕುರಿತು ಮುಂದಿನ ಕ್ರಮಕ್ಕಾಗಿ ಸರಕಾರದ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕಾಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ ಎಸ್.ಎಸ್. ಬಿಚ್ಚಾಲಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಸಾಮಾಜಿಕ ಕಾರ್ಯಕರ್ತ ಮಂಜಯ್ಯಸ್ವಾಮಿ ಅರವಟಗಿಮಠ, ನಾಗಲಿಂಗಯ್ಯ ಮುತ್ತಾಳಮಠ, ಶಾಂತಪ್ಪ ಬರಗಲ್ಲ, ಪರಶುರಾಮ ಮರಡಿ, ಶಂಕರಗೌಡ ಹೊಸಮನಿ, ಶರಣಯ್ಯ ಮುತ್ತಾಳಮಠ ಡಂಬಳ ಮತ್ತು ರೈತರು ಇದ್ದರು.



