ವಿಜಯಸಾಕ್ಷಿ ಸುದ್ದಿ, ದೊಡ್ಡಬಳ್ಳಾಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ, ಆರ್ಯಭಟ ಸಂಚಾರಿ ತಾರಾಲಯ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ದಾಖಲೆಯ ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರ ನಾನೂ ವಿಜ್ಞಾನಿ 2025’ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 01ರಿಂದ 09ರವರೆಗೆ 9 ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ರಾಜ್ಯದ 168 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಅಕ್ಟೋಬರ್ 8ರ ಸಾಯಂಕಾಲ 4 ಗಂಟೆಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’, `ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸಂಸ್ಥೆಯ ಹಿರಿಯ ವಕೀಲರಾದ ಹರೀಶ್ ಅವರು ತೀರ್ಪುಗಾರರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಒಂಬತ್ತು ದಿನಗಳ ಕಾಲ ವಿದ್ಯಾರ್ಥಿಗಳು ತಯಾರಿಸಿದ ಟೆಲಿಸ್ಕೋಪ್ಗಳನ್ನು ಪರಿಶೀಲಿಸಲಿದ್ದಾರೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದ ಸಂಚಾಲಕರು ಹಾಗೂ ತರಬೇತುದಾರರಾದ ಬಿ.ಎಸ್. ಸತೀಶ್, ಭಾರತ ಡೋಮ್ ಇನ್ನೋವೇಶನ್ ಪ್ರೈ.ಲಿ. ಹಾಗೂ ಆರ್ಯಭಟ ಪ್ಲಾನಿಟೋರಿಯಂನ ಆರ್ ಲಕ್ಷ್ಮೀಪತಿ ಉಪಸ್ಥಿತರಿರುವರು. ಈ ಐತಿಹಾಸಿಕ ಶಿಬಿರದಲ್ಲಿ ರಾಜ್ಯದ ಸುಮಾರು 95 ಶಿಕ್ಷಕರು ಭಾಗವಹಿಸಿದ್ದು, ಪರಿಷತ್ತಿನ ರಾಜ್ಯ ಕಮಿಟಿಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರುಗಳು ಈ ಸಮಾರಂಭದಲ್ಲಿ ಉಪಸ್ಥಿತರಿರುವರು.



