ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವಿರುದ್ದ ಬೀದಿಗಿಳಿದ ಕಿರುತೆರೆ ಕಾರ್ಮಿಕರು: 68 ಧಾರಾವಾಹಿಗಳ ಶೂಟಿಂಗ್ ಸ್ಥಗಿತ

0
Spread the love

ಕಿರುತೆರೆ ಕಾರ್ಮಿಕರ ಒಕ್ಕೂಟ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವಿರುದ್ದ ಹೋರಾಟಕ್ಕಿಳಿದಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಸಂಭಾವನೆ ಹೆಚ್ಚಳ, ಕೆಲಸದ ಸಮಯ ಇಳಿಕೆ ವಿಚಾರವಾಗಿ ಪ್ರಸ್ತಾಪಿಸಲಾಗಿದೆ.

Advertisement

ಟೆಲಿವಿಷನ್ ಅಸೋಸಿಯೇಷನ್ ನಲ್ಲಿ ಕೆಲಸ ಮಾಡ್ತಿರುವ 1000ಕ್ಕೂ ಹೆಚ್ಚು ಕಾರ್ಮಿಕರಿದ್ದು ಸದ್ಯ ಅಸೋಷಿಯೇಶನ್ ವಿರುದ್ದ  300ಕ್ಕೂ ಹೆಚ್ಚ ಕಾರ್ಮಿಕರು ಪ್ರತಿಭಟನೆಗಳಿದಿದ್ದಾರೆ. ಈ ಹಿನ್ನೆಲೆಯಲ್ಲಿ 65 ಧಾರವಾಹಿಗಳ ಶೂಟಿಂಗ್ ಬಂದ್ ಆಗಿದೆ. ಕಿರುತೆರೆಯಲ್ಲಿ ಒಟ್ಟು 68 ಧಾರಾವಾಹಿಗಳು ಪ್ರಸಾರ ಆಗುತ್ತಿದ್ದು ಅವುಗಳಲ್ಲಿ ಕೇವಲ ಮೂರು ಸೀರಿಯಲ್ ಗಳ ಶೂಟಿಂಗ್ ನಡೆಯುತ್ತಿದೆ. ಉಳಿದ 65 ಧಾರವಾಹಿಗಳ ಶೂಟಿಂಗ್ ಬಂದ್ ಆಗಿದೆ.

ಕಾರ್ಮಿಕರ ಹೋರಾಟಕ್ಕೆ ಎಚ್ಚೆತ್ತ ನಿರ್ಮಾಪಕರು ಕಾರ್ಮಿಕರ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಮೇಕಪ್, ವಸ್ತ್ರಾಲಂಕಾರ, ಲೈಟ್ ಬಾಯ್ಸ್,ಸೆಟ್ ಬಾಯ್ಸ್ , ಸೌಂಡ್, ಹೇರ್ ಸ್ಟೈಲಿಸ್ಟ್ ಯೂನಿಯನ್ ಜೊತೆ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಎಲ್ಲಾ ಯೂನಿಯನ್ ನಿಂದ ನಾಲ್ಕು ಜನರನ್ನ ಕರೆಸಿ ಸಂಧಾನಕ್ಕೆ ಮುಂದಾಗಿರೋ ನಿರ್ಮಾಪಕರು ಈ ಕುರಿತು ಕ್ರಮ ಕೈಗೊಳ್ಳಲಿದ್ದಾರೆ. ಇಂದಿನ ಮಾತುಕತೆಯಲ್ಲಿ ಸಂಧಾನ ಆಗದಿದ್ರೆ ಫ್ರೀಡಂ
ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲು ಟಿವಿ ಕಾರ್ಮಿಕರು ಸಜ್ಜಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here