ವಿಜಯಸಾಕ್ಷಿ ಸುದ್ದಿ, ಗದಗ: ಕುಟುಂಬಕ್ಕಾಗಿ ಬದುಕಿದವರನ್ನು ಮರೆಯುತ್ತಾರೆ. ಸಮಾಜಕ್ಕಾಗಿ ಬದುಕಿದವರನ್ನು ಎಲ್ಲರೂ ಸ್ಮರಿಸುತ್ತಾರೆ ಎಂದು ಹುಲಿಜಂತಿಯ ಪೂಜ್ಯಶ್ರೀ ಮಾಳಿಂಗರಾಯ ಮಹಾರಾಯರು ಹೇಳಿದರು.
ಅವರು ನಗರದ ಕನಕಭವನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಸಮಾಜದ ಸಹಯೋಗದಲ್ಲಿ ಮಂಗಳವಾರ ನಡೆದ ದಾಸಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ, ಸಾಧಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಕನಕದಾಸರ ಹೆಸರಿನಲ್ಲಿ ಜಯಂತಿ ಆಚರಿಸಿದರೆ ಸಾಲದು, ಅವರ ತತ್ವಾದರ್ಶ ಹಾಗೂ ಸಂಸ್ಕಾರವನ್ನು ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ಹಾಲುಮತ ಸಮಾಜ ಕಲ್ಮಶವಿಲ್ಲದ ಶುದ್ಧ ಹಾಲಿನಂತಹ ಸಮಾಜವಾಗಿದೆ. ಆದರೆ, ಇಲ್ಲಿ ಹೆಪ್ಪು ಹಾಕುವದಕ್ಕಿಂತ ಉಪ್ಪು ಹಾಕುವವರೇ ಹೆಚ್ಚಾಗಿದ್ದು, ಅಂತವರಿಂದ ಎಚ್ಚರವಹಿಸಿ ಸಮಾಜವನ್ನು ಸಂಘಟಿಸಬೇಕು ಎಂದು ಹೇಳಿದರು.
ಧಾರವಾಡ ಮನಸೂರ ಶ್ರೀಮಠದ ಪೂಜ್ಯಶ್ರೀ ಬಸವರಾಜ ದೇವರು ಮಾತನಾಡಿ, ಕನಕದಾಸರು ಮನಸ್ಸು ಮಾಡಿದ್ದರೆ ವಿಜಯನಗರ ಸಾಮ್ರಾಜ್ಯದಲ್ಲಿ ಅಧಿಪತಿಯಾಗುತ್ತಿದ್ದರು. ಆದರೆ, ಅಲ್ಲಿನ ಜಾತೀಯತೆಯಿಂದ ಅವರಿಗೆ ಯೋಗ ಸಿಗಲಿಲ್ಲ. ನಂತರ ಹಕ್ಕ-ಬುಕ್ಕರು ಹಾಲುಮತ ಸಮಾಜದವರಿಗೆ ಸ್ಥಾನಮಾನ ಒದಗಿಸಿಕೊಟ್ಟರು. ಅದ್ದರಿಂದ ನಮ್ಮ ಹಕ್ಕುಗಳಿಗಾಗಿ ಜಾತಿವಾದಿಗಳಿಗೆ ಒಗ್ಗಟ್ಟಿನ ಮೂಲಕ ನಮ್ಮ ಶಕ್ತಿ ತೋರಿಸಬೇಕಾಗಿದೆ ಎಂದು ಹೇಳಿದರು.
ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೮೩ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಂದು ಸಚಿವರಾಗಿದ್ದ ಸಿದ್ದರಾಮಯ್ಯ ಅವರು ಕನಕದಾಸರ ಜಯಂತಿ ಆಚರಣೆಗೆ ಚಾಲನೆ ನೀಡಿದರು. ಅಂದಿನಿAದ ಇಂದಿನವರೆಗೆ ಕನಕದಾಸರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಗದುಗಿನ ಕನಕಭವನ ಸಮಾಜದ ಆಸ್ತಿಯಾಗಿದೆ. ಇಂದಿನ ಯುವಕರು ಸಮಾಜವನ್ನು ಸಂಘಟಿಸಿ ಇನ್ನಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ರವಿ ದಂಡಿನ, ಡಾ. ಗೋವಿಂದಪ್ಪನವರ, ಬೆಟಗೇರಿ ಪಿಎಸ್‌ಐ ಲಕ್ಷ್ಮಣ ಅರಿ, ಪ್ರಕಾಶ ಕರಿ, ಶರಣಪ್ಪ ದೊಣ್ಣೆಗುಡ್ಡ ಮುಂತಾದವರು ಮಾತನಾಡಿದರು. ಪ್ರೊ. ಕರಿಯಪ್ಪ ಕೊಡವಳ್ಳಿ ಕನಕದಾಸರ ಜೀವನ ಕುರಿತು ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ಬಿ.ಎಫ್. ದಂಡಿನ, ಡಾ. ಜಿ.ಬಿ. ಬಿಡಿನಹಾಳ, ಶಂಕುAತಲಾ ದಂಡಿನ, ಸುರೇಖಾ ಕುರಿ, ನಾಗಪ್ಪ ಗುಗ್ಗರಿ, ನಾಗರಾಜ ಮೆಣಸಗಿ, ರಾಮಕೃಷ್ಣ ರೊಳ್ಳಿ, ಎಸ್.ಕೆ. ಪಾಟೀಲ, ರಾಜು ಕಲ್ಲೂರ, ರಾಮಣ್ಣ ಹೂವಣ್ಣವರ, ಪ್ರಲ್ಹಾದ ಹೊಸಳ್ಳಿ, ಚನ್ನಮ್ಮ ಹುಳಕಣ್ಣವರ, ಉಮಾ ದ್ಯಾವನೂರ, ನೇತ್ರಾವತಿ ಗುಂಡಿಕೇರಿ, ಮಂಜುನಾಥ ಜಡಿ, ಹೇಮಂತ ಎಸ್.ಜಿ., ಕುಮಾರ ಮಾರನಬಸರಿ, ಬಸವರಾಜ ಕುರಿ, ರವಿ ವಗ್ಗನವರ, ಶೇಖಣ್ಣ ಕಾಳೆ, ಮಂಜುನಾಥ ಮುಂಡವಾಡ, ರವಿ ಜೋಗಿನ, ಶಿವಣ್ಣ ಶಿಂಗಟಾಲಕೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ರೇಖಾ ಜಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಮಾರುತಿ ಮಡ್ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.