HomeKarnataka Newsಟೆಂಪೋ ಟ್ರಾವೆಲರ್ ಟೈಯರ್ ಬ್ಲಾಸ್ಟ್: ಸರಣಿ ಅಪಘಾತದಲ್ಲಿ ಮೂವರು ಸಾವು!

ಟೆಂಪೋ ಟ್ರಾವೆಲರ್ ಟೈಯರ್ ಬ್ಲಾಸ್ಟ್: ಸರಣಿ ಅಪಘಾತದಲ್ಲಿ ಮೂವರು ಸಾವು!

For Dai;y Updates Join Our whatsapp Group

Spread the love

ಕಲಬುರ್ಗಿ:- ಟೆಂಪೋ ಟ್ರಾವೆಲರ್ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಟಿಟಿ, ಕಬ್ಬಿನ ಲಾರಿ ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಕಲಬುರಗಿ ಜಿಲ್ಲೆಯ ಗೊಬ್ಬೂರ್ ಬಿ ಗ್ರಾಮದ ಹೊರವಲಯದಲ್ಲಿ ಜರುಗಿದೆ.

ಘಟನೆ ಪರಿಣಾಮ ಟೆಂಪೋ ಟ್ರಾವೇಲರ್ ನಲಿದ್ದ ಇಬ್ಬರು, ಹಾಗೂ ಬೈಕ್‌ನಲ್ಲಿದ್ದ ಓರ್ವ ಸೇರಿ ಮೂವರು ಸಾವನ್ನಪ್ಪಿದ್ದಾರೆ. 54 ವರ್ಷದ ವಿನೂತಾ ಕಲಬುರಗಿ, 29 ವರ್ಷದ ಅನೂಪ್ ಮಾಧವ್, 33 ವರ್ಷದ ಬಸವರಾಜ್ ಸಾವನ್ನಪ್ಪಿದ ದುರ್ದೈವಿಗಳು.

ಮೃತ ವಿನೂತಾ ಹಾಗೂ ಅನೂಪ್ ಮಾಧವ್ ಕಲಬುರಗಿಯ ಸ್ಟೇಷನ್ ಬಜಾರ್ ಏರಿಯಾದ ನಿವಾಸಿ ಎನ್ನಲಾಗಿದೆ. ಮೃತ ಬೈಕ್ ಸವಾರ ಬಸವರಾಜ್ ಗೊಬ್ಬೂರ್ ಬಿ ಗ್ರಾಮದ ನಿವಾಸಿ ಆಗಿದ್ದಾರೆ. ಇನ್ನೂ ಟಿಟಿಯಲ್ಲಿದ್ದ ಉಳಿದ ಏಳು ಜನ ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ‌ ಮಾಡಲಾಗಿದೆ.

ಗಾಣಗಾಪುರದ ದತ್ತನ ದರ್ಶನ ಮುಗಿಸಿಕೊಂಡು ಕಲಬುರಗಿಗೆ ಟಿಟಿ ವಾಹನ ಬರುತ್ತಿತ್ತು. ಇನ್ನೂ ಕಲಬುರಗಿಯಿಂದ ಚವಡಾಪುರದ ಕಡೆಗೆ ಕಬ್ಬು ತುಂಬಿಕೊಂಡು ಲಾರಿ ಹೊರಟಿತ್ತು. ಈ ವೇಳೆ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಕಲಬುರಗಿ ಎಸ್ ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!