HomeIndia Newsಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: 6 ದಿನಗಳಲ್ಲಿ 23 ಸಾವಿರಕ್ಕೂ ಹೆಚ್ಚು ವಿಮಾನ ರದ್ದು

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: 6 ದಿನಗಳಲ್ಲಿ 23 ಸಾವಿರಕ್ಕೂ ಹೆಚ್ಚು ವಿಮಾನ ರದ್ದು

For Dai;y Updates Join Our whatsapp Group

Spread the love

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಕಳೆದ ಆರು ದಿನಗಳಲ್ಲಿ 23,000ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ಜಾಗತಿಕ ವಿಮಾನಯಾನ ಉದ್ಯಮದ ಮೇಲೆ ದೊಡ್ಡ ಆರ್ಥಿಕ ಪರಿಣಾಮ ಉಂಟಾಗಿದೆ.

ಇರಾನ್ಇಸ್ರೇಲ್ ಸಂಘರ್ಷದ ಹಿನ್ನೆಲೆ ಫೆಬ್ರವರಿ 28ರಿಂದ ಗಲ್ಫ್ ಪ್ರದೇಶಕ್ಕೆ ಹಾಗೂ ಅಲ್ಲಿಂದ ಇತರ ದೇಶಗಳಿಗೆ ನಿಗದಿಯಾಗಿದ್ದ 23,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದರ ಪರಿಣಾಮವಾಗಿ ಸುಮಾರು 4.4 ಮಿಲಿಯನ್ (44 ಲಕ್ಷ) ಪ್ರಯಾಣಿಕರ ಸೀಟುಗಳು ಪ್ರಭಾವಿತರಾಗಿವೆ.

ವಿಮಾನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ Air India ಹೆಚ್ಚುವರಿ ಸೇವೆಗಳನ್ನು ಆರಂಭಿಸಲು ಮುಂದಾಗಿದೆ. ಮಾರ್ಚ್ 5ರಿಂದ 11ರವರೆಗೆ ದೆಹಲಿ–ಟೊರೊಂಟೊ ಮಾರ್ಗದಲ್ಲಿ ಹಾಗೂ ಮಾರ್ಚ್ 7ರಿಂದ 10ರವರೆಗೆ ದೆಹಲಿ–ಫ್ರಾಂಕ್ಫರ್ಟ್ ಮಾರ್ಗದಲ್ಲಿ ಮೂರು ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸಲಿವೆ.

ಜೊತೆಗೆ ದೆಹಲಿ–ಪ್ಯಾರಿಸ್ ನಡುವೆ ಒಂದು ಹೆಚ್ಚುವರಿ ವಿಮಾನವನ್ನು ನಿಯೋಜಿಸಲಾಗಿದೆ. ಮಧ್ಯಪ್ರಾಚ್ಯದಿಂದ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾರ್ಚ್ 11ರ ಬಳಿಕವೂ ಹೆಚ್ಚುವರಿ ಸೇವೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಇದೇ ವೇಳೆ ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಎಮಿರೇಟ್ಸ್ ದುಬೈಗೆ ಮತ್ತು ದುಬೈನಿಂದ ವಿಮಾನಗಳ ಸ್ಥಗಿತವನ್ನು ಮಾರ್ಚ್ 7ರವರೆಗೆ ವಿಸ್ತರಿಸಿದೆ. ಕಳೆದ ಶನಿವಾರದಿಂದ 2,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ಒಮಾನ್ ಏರ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್ 6ರವರೆಗೆ ಅಮ್ಮಾನ್, ದುಬೈ, ಬಹ್ರೇನ್, ದೋಹಾ, ದಮ್ಮಾಮ್, ಕುವೈತ್, ಕೋಪನ್‌ಹ್ಯಾಗನ್, ಬಾಗ್ದಾದ್ ಮತ್ತು ಖಾಸಬ್‌ಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ದಟ್ಟಣೆಯಿಂದಾಗಿ ಮಸ್ಕತ್‌ಗೆ ಪ್ರಯಾಣಿಸುವವರು ನಿರ್ಗಮನಕ್ಕೆ ಕನಿಷ್ಠ 12 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಸಂಸ್ಥೆ ಸೂಚಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!