ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025ರ ಉಳಿದ ಪಂದ್ಯಗಳನ್ನು ರದ್ದುಗೊಳಿಸಿದೆ. ಹೌದು ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರತೀಕಾರ ಸಮರ ನಡೆಯುತ್ತಿದ್ದು, ಯುದ್ಧದ ಭೀತಿ ಹೆಚ್ಚಾಗಿದೆ.
ಹೀಗಾಗಿ ಪ್ಲೇ ಆಫ್ಸ್ ಸೇರಿ ಇನ್ನೂ 16 ಪಂದ್ಯಗಳು ಬಾಕಿ ಇರುವಾಗಲೇ ಬಿಸಿಸಿಐ 2025ರ ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸಿದೆ. ಆಟಗಾರರ ಸುರಕ್ಷತೆಯಿಂದ ಇಂದಿನಿಂದ ನಡೆಯಬೇಕಿದ್ದ ಎಲ್ಲ ಐಪಿಎಲ್ ಪಂದ್ಯಾವಳಿಗಳನ್ನು ಬಿಸಿಸಿಐ ರದ್ದುಗೊಳಿಸಿದೆ.
ಇದೇ ಮೇ 25ರ ತನಕ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆಯಬೇಕಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವುದರಿಂದ ಎಲ್ಲ ಪಂದ್ಯಗಳನ್ನು ಅನಿರ್ದಿಷ್ಟಾವಧಿಯಾಗಿ ಮುಂದೂಡಲಾಗಿದೆ. ಈ ಹಿಂದೆ 2021ರ ಕೋವಿಡ್ ಸಂದರ್ಭದಲ್ಲಿಯೂ ಐಪಿಎಲ್ ಟೂರ್ನಿಯನ್ನ ರದ್ದುಗೊಳಿಸಲಾಗಿತ್ತು.



