ಆನೇಕಲ್:– ಬೆಂಗಳೂರು ಹೊರವಲಯದ ಅತ್ತಿಬೆಲೆಯ ಟಿವಿಎಸ್ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಿವೃತ್ತ ಪೊಲೀಸ್ ಸಾವನ್ನಪ್ಪಿದ ಘಟನೆ ಜರುಗಿದೆ.
Advertisement
ಆಕ್ಟಿವಾ ಬೈಕ್‌ಗೆ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ನಿವೃತ್ತ ಪೊಲೀಸ್ ಅಧಿಕಾರಿ ಸಾವನ್ನಪ್ಪಿರುವ ಭೀಕರ ಘಟನೆ ಜರುಗಿದೆ. ಮೃತ ವ್ಯಕ್ತಿಯನ್ನು ಆಡುಗೋಡಿ ಮೂಲದ ನಿವೃತ್ತ ಎಎಸ್‌ಐ ಪ್ರಕಾಶ್ ಎಂದು ಗುರುತಿಸಲಾಗಿದೆ.
ಟಿವಿಎಸ್ ಕ್ರಾಸ್ ಬಳಿ ಆಕ್ಟಿವಾ ಬೈಕ್‌ನಲ್ಲಿ ಪ್ರಕಾಶ್ ತೆರಳುತ್ತಿದ್ದರು. ಈ ವೇಳೆ ಧರ್ಮಪುರಿಯಿಂದ ಮಂಗಳೂರಿಗೆ ಹೊರಟಿದ್ದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್‌ಗೆ ಸಿಲುಕಿ ಪ್ರಕಾಶ್ ದೇಹ ಛಿದ್ರ ಛಿದ್ರಗೊಂಡಿದೆ.
ಅಪಘಾತ ಸಂಭವಿಸಿದ ಬಳಿಕ ಕ್ಯಾಂಟರ್ ಚಾಲಕ ದಿನೇಶ್ ಪಾರಾಗಲು ಯತ್ನಿಸಿದ್ದು, ಪೊಲೀಸರು ಚಾಲಕ ಹಾಗೂ ಕ್ಯಾಂಟರ್‌ನ್ನು ವಶಕ್ಕೆ ಪಡೆದಿದ್ದಾರೆ.