ಟಾಟಾ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ! ಹತೋಟಿಗೆ ಬಾರದ ಬೆಂಕಿಯ ಕೆನ್ನಾಲಿಗೆ

0
Spread the love

ಬೆಂಗಳೂರು: ಟಾಟಾ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ ಘಟನೆ ಹೊಸೂರಿನ ಕೆಲಮಂಗಲ ಬಳಿಯ ಇರುವ ಸೆಲ್ ಫೋನ್ ತಯಾರಿಕಾ ಘಟಕದಲ್ಲಿ ನಡೆದಿದೆ. ಸುಮಾರು  500 ಎಕರೆ ಪ್ರದೇಶದಲ್ಲಿ ಇರುವ ಟಾಟಾ ಕಾರ್ಖಾನೆಯಿದ್ದು, ಒಂದೇ ಶಿಪ್ಟ್ ನಲ್ಲಿ ಸುಮಾರು 1500 ರಿಂದ 2000 ಜನರು 24 ಗಂಟೆ ಕೆಲಸ ಮಾಡುತ್ತಿದ್ದರು.

Advertisement

ಇಂದು ಮುಂಜಾನೆ ರಾಸಾಯನಿಕ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ರಾಯಕೋಟೆ ಮತ್ತು ಡೆಂಕಣಿಕೋಟೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು. ರಾಯಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here