ಕೊಪ್ಪಳ:- ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಬಳಿ ಜರುಗಿದೆ.
ಬೈಕ್ಗೆ ಬುಲೆರೋ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಮೃತರನ್ನು ವಾಜೀದ್, ರಾಜಹುಸೇನ್, ಆಸೀಫ್ ಎಂದು ಗುರುತಿಸಲಾಗಿದೆ. ವಾಜೀದ್, ರಾಜಹುಸೇನ್ ಕೊಪ್ಪಳ ತಾಲೂಕಿನ ಹೊಸಹಳ್ಳಿ ನಿವಾಸಿಗಳು. ಆಸೀಫ್ ಗಂಗಾವತಿ ತಾಲೂಕಿನ ಶ್ರೀರಾಮನಗರ ನಿವಾಸಿ ಎಂದು ತಿಳಿದುಬಂದಿದೆ.
ಶ್ರೀರಾಮನಗರಿಂದ ಹೊಸಹಳ್ಳಿಗೆ ಬರೋವಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಬಳಿಕ ಬುಲೆರೋ ಚಾಲಕ ಪರಾರಿಯಾಗಿದ್ದಾನೆ. ಸ್ಥಳೀಯ ಸಂಚಾರಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ಪತ್ತೆಗೆ ಮುಂದಾಗಿದ್ದಾರೆ.



