ಬೆಂಗಳೂರು:- ಕೆಎಸ್ಆರ್ಟಿಸಿ ಬಸ್ & ಆಟೋ ಮಧ್ಯೆ ಭೀಕರ ಸರಣಿ ಅಪಘಾತ ನಡೆದಿರುವ ಘಟನೆ ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದೆ.
Advertisement
ಘಟನೆ ಪರಿಣಾಮ ಪಕ್ಕದಲ್ಲಿದ್ದ ಗಾಡಿಗಳು ಕೂಡ ಡ್ಯಾಮೇಜ್ ಆಗಿದೆ. KSRTC ಬಸ್ ಡಿವೈಡರ್ ಗುದ್ದಿ ಆಚೆ ಬಂದಿದೆ. ಇನ್ನೂ ಆಟೋ ಚಾಲಕ ರೈಟ್ ಸೈಡ್ ಅಲ್ಲಿ ಓವರ್ ಟೇಕ್ ಮಾಡಲು ಬಂದಾಗ ಅವಘಡ ಸಂಭವಿಸಿದೆ.
ಘಟನೆಯಿಂದ ಆಟೋ ಸಂಪೂರ್ಣ ಜಖಂ ಆಗಿದ್ದು, ಇದರಿಂದ ಕಾರು, ಖಾಸಗಿ ಬಸ್ ಗೂ ಹಾನಿ ಆಗಿದ್ದು, ಇಬ್ಬರು ಚಾಲಕರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.