ಹುಬ್ಬಳ್ಳಿ: ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಜಗಳ ಸರಿ ಅಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭಯೋತ್ಪಾದಕರನ್ನು ಉತ್ಪಾದನೆ ಮಾಡಿ ಅವರನ್ನು ಬೆಳೆಸಿದೆ. ಮೋದಿಯವರು ಭಯೋತ್ಪಾದಕರನ್ನು ಹತ್ತಿಕ್ಕಿದ್ದಾರೆ. ಆದರೆ ನಿಜವಾದ ಭಯೋತ್ಪಾದಕರು ಬೇರೆ ಕಡೆ ಇದ್ದಾರೆ. ಯಾಕೆ ಇಷ್ಟು ಕೆಳಮಟ್ಟಕ್ಕೆ ಸಿದ್ದರಾಮಯ್ಯ ಅವರು ಹೋದರು ಎಂದು ಅರ್ಥ ಆಗುತ್ತಿಲ್ಲ.
Advertisement
ಅವರು ಬಳಸುವ ಭಾಷೆ ಬಹಳ ಕೆಳಮಟ್ಟಕ್ಕೆ ಹೋಗಿದೆ. ಮೋದಿ ಅಧಿಕಾರಕ್ಕೆ ಬಂದು ಎಲ್ಲವನ್ನೂ ಹಿಡಿತಕ್ಕೆ ತಂದಿದ್ದಾರೆ. ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಜಗಳ ಸರಿ ಅಲ್ಲ ಎಂದರು. ಹಳೇಹುಬ್ಬಳ್ಳಿ ಗಲಭೆ ಕೇಸ್ ಸಂಘಟಿತವಾಗಿತ್ತು. ಲಾಭೂರಾಮ್ ಸುಪ್ರೀಂ ಕೋರ್ಟ್ ತನಕ ಹೋಗಿದ್ದರು. ಆ ಕೇಸ್ ವಾಪಸ್ ಪಡೆದಿರೋದು ಸಂವಿಧಾನಕ್ಕೆ ಅಗೌರವ ಕೊಡೋ ಕೆಲಸವಾಗಿದೆ. ಸಮಾಜದಲ್ಲಿ ಸಂಘರ್ಷಕ್ಕೆ ಇದು ಕಾರಣವಾಗುತ್ತದೆ ಎಂದು ಹೇಳಿದರು.