ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಾಂಧಿ ವೃತ್ತದಲ್ಲಿ ಜಮ್ಮ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಹಾಗೂ ಅಮಾನವೀಯವಾಗಿ ನಡೆದ ದಾಳಿಯಲ್ಲಿ ಹುತ್ಮಾತರಾದ ಭಾರತೀಯರಿಗೆ ಹಾಗೂ ವಿದೇಶಿ ಪ್ರಜೆಗಳಿಗೆ ಶ್ರೀರಾಮ ಸೇನಾ, ಆಟೋ ಸೇನಾ ಹಾಗೂ ದಲಿತ ಮಿತ್ರ ಮೇಳಗಳ ವತಿಯಿಂದ ದೀಪ ಬೆಳಗಿಸಿ, ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತ್ತು.
ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾಡನಾಡಿ, ಭಯೋತ್ಪಾದಕರ ಈ ಕೃತ್ಯಕ್ಕೆ ತಕ್ಕ ಪ್ರತ್ಯುತರ ನೀಡಬೇಕು. ಅದು ಯುದ್ಧ ಸಾರುವ ಮೂಲಕವಾದರೂ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರಾಜು ಗುಡಿಮನಿ, ದಲಿತ ಮುಂಖಡರಾದ ಮಂಜುನಾಥ ಕೋಟ್ನಿಕಲ್, ರಾಘವೇಂಧ್ರ ಪರಾಪೂರ, ಸುರೇಶ ಹಾದಿಮನಿ, ಸಂಘಟನೆಗಳ ಪ್ರಮುಖರಾದ ಮಹೇಶ ರೋಖಡೆ, ಹುಲಗಪ್ಪ ವಾಲ್ಮೀಕಿ, ಕಿರಣ ಹಿರೇಮಠ, ಸತೀಶ ಕುಂಬಾರ, ವೆಂಕಟೇಶ ದೊಡ್ಡಮನಿ, ರಾಚೋಟಿ ಕಾಡಪ್ಪನವರ, ಶರಣೇಶ ರಾಜು ಗದ್ದಿ, ಬಸವರಾಜ ಕುರ್ತಕೋಟಿ, ವಿಶ್ವನಾಥ ಶೀರಿ, ಸಂಜೀವ ಚೆಟ್ಟಿ, ಸುನೀಲ ಮುಳ್ಳಾಳ, ಈರಣ್ಣ ಗಾಣಿಗೇರ, ಶಿವಯೋಗಿ ಹಿರೇಮಠ, ಸ್ವರೂಪ ಉಳ್ಳಿಕಾಶಿ, ಮಾನೇಶ ದಾಸರ, ಮಂಜುನಾಥ ಗುಡಿಮನಿ, ಶರಣಪ್ಪ ಲಕ್ಕುಂಡಿ, ಕುಮಾರ ಮಿಟ್ಟಿಮಠ, ಶಶಿಧರ ಘಟ್ಟಿ, ಅಶೋಕ ಭಜಂತ್ರಿ, ಶ್ರೀನಿವಾಸ ನಿಂಬಲಗುಂಡಿ, ರೇಖಾ ಹುಲ್ಲೂರ ಇಟಗಿ ಮುಂತಾದವರು ಉಪಸ್ಥಿತರಿದರು.