ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕವೇ ಗುರುತಿಸಿಕೊಂಡ ನಟಿ ಸೋನು ಗೌಡ. ಇದೀಗ ಸೋನು ಗೌಡ ಸಂದರ್ಶನವೊಂದರಲ್ಲಿ ತಮ್ಮ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ.
2010ರಲ್ಲಿ ಮನೋಜ್ ಕುಮಾರ್ ಎಂಬುವವರ ಜೊತೆ ಸೋನು ಗೌಡ ಮದುವೆಯಾಗಿದ್ದರು. ಆದ್ರೆ ಸೋನು ಗೌಡ ಅವರ ಖಾಸಗಿ ಫೋಟೊಗಳು ಲೀಕ್ ಆಗಿ ಭಾರೀ ಸುದ್ದಿಯಾಗಿತ್ತು. ಹ್ಯಾಕರ್‌ಗಳು ಮಾಡಿದ ಎಡವಟ್ಟಿನಿಂದ ರಾದ್ಧಾಂತವಾಗಿತ್ತು. ಇದೀಗ ಯೂಟ್ಯೂಬ್ ಚಾನಲ್‌ನಲ್ಲಿ ಸೋನು ಗೌಡ ತಮ್ಮ ಮದುವೆ ಹಾಗೂ ಡಿವೋರ್ಸ್ ವಿಚಾರವನ್ನು ಮುಕ್ತವಾಗಿ ಮಾತನಾಡಿದ್ದಾರೆ.
ನನ್ನ ಗಂಡ ಹಾಗೂ ನನಗೆ ವಯಸ್ಸಿನ ತುಂಬಾ ವ್ಯತ್ಯಾಸ ಇತ್ತು. ಆಗ ನನಗೆ ಅವನು ಬಿಟ್ಟುಕೊಡಲ್ಲ ಎಂದೇ ಇತ್ತು. ಹುಡುಗ ತಪ್ಪು, ಹುಡುಗಿ ತಪ್ಪು ಅಲ್ಲ. ಯೋಚನೆ ಮಾಡುವ ರೀತಿ ತಪ್ಪು ಆಗಿರುತ್ತೆ. ಯಾರು ಎಷ್ಟೇ ಏನು ಇದ್ದರೂ ನನಗೆ ಅವನೇ ಬೇಕು ಅಂತ ಇದ್ದೆ. ನಾನು ತುಂಬಾ ಕಫರ್ಟ್ ಇದ್ದಿದ್ದೆ. ನನ್ನ ತಲೇಲಿ ಇದ್ದಿದ್ದು, ನನಗೋಸ್ಕರ ಎಲ್ಲ ಮಾಡ್ತಾನೆ ಅಂತ.
ಆರು ವರ್ಷದಲ್ಲಿ ನನಗೆ ಗೊತ್ತಾಗಿಲ್ಲ. ನಾನು ಎಲ್ಲ ಅಕೌಂಟ್‌ವನ್ನು ಅವನಿಗೆ ಕೊಟ್ಟಿದ್ದೆ. ಬ್ರೇಕಪ್ ಸಮಯದಲ್ಲಿ ಮಗು ಮಾಡ್ಕೋ ಎಂದೇ ಸಜೇಜನ್ ಕೊಟ್ಟರು. ಬಳಿಕ ಡಿವೋರ್ಸ್ ಆಯ್ತು. ಜೀವನಾಂಶ ಕೂಡ ನಾನು ತೆಗೆದುಕೊಂಡಿಲ್ಲ. ಪ್ರೈವೇಟ್ ಫೋಟೋಗಳು ಲೀಕ್ ಆಯ್ತು. ನನ್ ಲೈಫ್‌ನಲ್ಲಿ ಇದು ಮಾತ್ರ ನಡೆದಬಾರ್ದಿತ್ತು. ನಂತರ ನಾನು ದೇವಸ್ಥಾನಕ್ಕೆ ಹೋಗಲೇ ಇಲ್ಲ. ಡಿವೋರ್ಸ್ ತೆಗೆದುಕೊಳ್ಳಲು ಇಷ್ಟ ಇಲ್ಲದೇ ಇದ್ದಾಗ, ಸತ್ತೋಗ ಬೇಕು ಅನ್ನಿಸುತ್ತಿತ್ತು. ನನಗೆ ದುಡ್ಡಲ್ಲ, ಮನು ಬೇಕಾಗಿತ್ತು. ಈಗೆಲ್ಲ ಎಲ್ಲ ಫೊಟೋಗಳನ್ನು ಎಲ್ಲರೂ ಕ್ಲಿಕ್ ಮಾಡ್ತಾರೆ. ಮದುವೆ ಹೊಸತರಲ್ಲಿ ಆ ಫೊಟೋ ಕ್ಲಿಕ್ ಮಾಡಿದ್ದು. ಅದು ಗೂಗಲ್ ಡ್ರೈವ್ ನಲ್ಲಿ ಬ್ಯಾಕ್ ಅಪ್ ಆಯ್ತು. ನನ್ನ ಫೇಸ್‌ಬುಕ್ ಅಲ್ಲಿ ಹ್ಯಾಕ್ ಆಯ್ತು. ನನ್ನ ಗೂಗಲ್ ಡ್ರೈವ್ ಅಲ್ಲಿ ಬ್ಯಾಕ್ ಅಪ್ ತೆಗೆದುಕೊಂಡು ಹಾಗೆ ಆಯ್ತು. ಆದರೆ ಅವನು ಹಾಗೆ ಮಾಡಿಲ್ಲ. ನಂತರ ಸೈಬರ್ ಪೊಲೀಸ್ ಹೋಗಿ, ಅದೆಲ್ಲ ಡಿಲಿಟ್ ಮಾಡಿದ್ದೆ. ನಂತರ ಮಾಧ್ಯಮ ಎಲ್ಲದಕ್ಕೂ ರಿಕ್ವೆಸ್ಟ್ ಮಾಡಿದ್ದೆ ಎಂದು ಸೋನು ಗೌಡ ಹೇಳಿದ್ದಾರೆ.