ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಅತ್ರೇಯ ಕ್ರಿಯೇಷನ್ ಲಾಂಛನದಲ್ಲಿ ಡಾ. ಸುಮಿತಾ ಪ್ರವೀಣ್ ಹಾಗೂ ಪ್ರವೀಣ್ ಸಿ.ಬಾನು ನಿರ್ಮಾಣದಲ್ಲಿ `ರಾಯರಿದ್ದಾರೆ’ ಶ್ರೀ ಗುರುರಾಘವೇಂದ್ರರಾಯರ ಭಕ್ತಿ ಕುರಿತಾದ ವಿಡಿಯೋ ಆಲ್ಬಂ ಸದ್ದು ಮಾಡುತ್ತಿದೆ.
ಮಂತ್ರಾಲಯದ ಶ್ರೀಗುರುರಾಘವೇಂದ್ರರಾಯರ 354ನೇ ಆರಾಧನೆಯ ಪ್ರಯುಕ್ತ ಮಂತ್ರಾಲಯದ ರಾಯರಮಠ ಹಾಗೂ ಗುಂಡ್ಲುಪೇಟೆಯ ಮೃತಿಕಾ ಬೃಂದಾವನದಲ್ಲಿ ರಾಯರ ಹಾಡಿನ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಇದರಲ್ಲಿ ಪ್ರವೀಣಭಾನು, ಸುಮಿತಾ ಪ್ರವೀಣ, ಋತುಸ್ಪರ್ಶ, ರವೀಂದ್ರ ಪೈ, ವಿಶ್ವ ಮೊದಲಾದವರು ಅಭಿನಯಿಸಿದ್ದಾರೆ.
ಛಾಯಾಗ್ರಹಣ ಋತುಸ್ಪರ್ಶ, ಸಾಹಿತ್ಯ ಮನೋಜ, ಸಂಗೀತ ನೀತು ನೀನಾದ, ಸಂಕಲನ ಆರ್.ಅನಿಲಕುಮಾರ್, ಪತ್ರಿಕಾ ಸಂಪರ್ಕ ಚಂದ್ರಶೇಖರ, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಪರಿಕಲ್ಪನೆ, ಗಾಯನ ಜೊತೆಗೆ ನಿರ್ದೇಶನ ಹೊಣೆ ಡಾ. ಸುಮಿತಾ ಪ್ರವೀಣ ಅವರದ್ದಾಗಿದೆ. ಋತುಸ್ಪರ್ಶ ಯೂಟ್ಯೂಬ್ ಚಾನೆಲ್‌ನಲ್ಲಿ ಆಲ್ಬಂ ಬಿಡುಗಡೆಯಾಗಿದ್ದು, ಸಮಸ್ತ ಭಕ್ತಾದಿಗಳು, ಕಲಾಪೋಷಕರು ವಿಡಿಯೋ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಡಾ. ಸುಮಿತಾ ಕೋರಿದ್ದಾರೆ.