ಬೆಂಗಳೂರು:- ಬೆಂಗಳೂರಿನ ಜ್ಞಾನಭಾರತಿಯ ಉಳ್ಳಾಲ ಬಳಿ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಮೇಲೆ ಫೈರಿಂಗ್ ಮಾಡಲಾಗಿದೆ.
Advertisement
ಈತ ಇತ್ತೀಚೆಗೆ ವ್ಯಕ್ತಿಯೋರ್ವನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊವಿಂದರಾಜನಗರ ಇನ್ಸ್ಪೆಕ್ಟರ್ ಸುಬ್ರಮಣ್ಯ ಮತ್ತು ಸಿಬ್ಬಂದಿ ಆರೋಪಿ ಪವನ್ನನ್ನು ತುಮಕೂರಿನಲ್ಲಿ ಬಂಧಿಸಿ ಕರೆತರುತ್ತಿದ್ದರು.
ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಪೊಲೀಸ್ ವಾಹನ ಜ್ಞಾನಭಾರತಿಯ ಉಳ್ಳಾಲ ಬಳಿ ಬರುತ್ತಿದ್ದಂತೆ ಆರೋಪಿ ಪವನ್ ಕಾನ್ಸ್ಟೇಬಲ್ ವೆಂಕಟೇಶ್ ಅವರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಹಿಡಿಯಲು ಹೋದ ಇನ್ಸ್ಪೆಕ್ಟರ್ ಸುಬ್ರಮಣ್ಯ ಅವರ ಮೇಲೂ ಹಲ್ಲೆ ಮಾಡಲು ಮುಂದಾದನು. ಆಗ, ಇನ್ಸ್ಪೆಕ್ಟರ್ ಸುಬ್ರಮಣ್ಯ ಅವರು ಆತ್ಮರಕ್ಷಣೆಗೆ ಆರೋಪಿ ಪವನ್ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.