Bangalore: ನಟಿ ರುಕ್ಮಿಣಿ ಬ್ಯಾಗ್ ಕದ್ದು ಪರಾರಿಯಾಗಿದ್ದ ಆರೋಪಿಯ ಬಂಧನ..!

0
Spread the love

ಬೆಂಗಳೂರು: ಭಜರಂಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದ ರುಕ್ಮಿಣಿ ಬ್ಯಾಗ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಮ್ಮದ್ ಬಸ್ತಾನ್ ಬಂಧಿತ ಆರೋಪಿಯಾಗಿದ್ದು, ಮೇ.11 ರಂದು ನಟಿ ರುಕ್ಮಿಣಿ ವಾಕಿಂಗ್ ಗೆ ಬಂದಾಗ ಚಿನ್ನಸ್ವಾಮಿ ಗೇಟ್ ನಂ.18 ಬಳಿ‌ ಕಾರ್ ನಿಲ್ಲಿಸಿದ್ದಳು.

Advertisement

ಕಾರ್ ಲಾಕ್ ಮಾಡೋದನ್ನ ಮರೆತು ಕಾರ್ ನಲ್ಲಿ ದುಬಾರಿ ಬೆಲೆಯ ಬ್ಯಾಗ್,ಪರ್ಸ್,ಡೈಮಂಡ್ ರಿಂಗ್ ಇಟ್ಟು ಹೋಗಿದ್ಳು, ಇದನ್ನು ಗಮನಿಸಿದ್ದ ಕ್ಯಾಬ್ ಚಾಲಕ ಮಹಮ್ಮದ್ ಮಸ್ತಾನ್, ಕಾರ್ ನಲ್ಲಿದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದನು. ಈ ಸಂಬಂಧ ನಟಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಬಂಧಿತನಿಂದ ಒಂದೂವರೆ ಲಕ್ಷದ ಬ್ಯಾಗ್, 75 ಸಾವಿರ ಮೌಲ್ಯದ ಪರ್ಸ್, 10 ಲಕ್ಷ ಮೌಲ್ಯದ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್,3 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಸೇರಿ ಒಟ್ಟು 23 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ.

 


Spread the love

LEAVE A REPLY

Please enter your comment!
Please enter your name here