ಟ್ರಕ್ʼನಲ್ಲಿ ಬರೋಬ್ಬರಿ 62 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್.!

0
Spread the love

ಬೆಂಗಳೂರು: ಬೆಂಗಳೂರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮಾಜಿ ರೌಡಿ ಶೀಟರ್ʼನನ್ನು ಎಚ್ ಎಸ್ ಆರ್ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಅಲಿಯಾಸ್ ಬಿಡ್ಡ ಬಂಧಿತ ಆರೋಪಿಯಾಗಿದ್ದು, ಹೊಗೆಸೊಪ್ಪು ಎಂದು ಟ್ರಕ್ ಡ್ರೈವರ್ ಗೆ ಸುಳ್ಳು ಹೇಳಿ ಒರಿಸ್ಸಾದಿಂದ ಟ್ರಕ್ ನಲ್ಲಿ ಬರೋಬ್ಬರಿ 62 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದನು.

Advertisement

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ರೌಡಿ ಶೀಟರ್‌ ಆಗಿದ್ದನು. ಆದ್ರೆ ಆರೋಗ್ಯ ಕಾರಣ ಕೊಟ್ಟು ರೌಡಿ ಶೀಟರ್ ತೆಗೆಯಲಾಗಿತ್ತು.

ಕೊಲೆ ,ರಾಬರಿ, ಮನೆಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಕುಡಿತ ಹಾಗೂ ಹುಡುಗಿಯರ ಚಟಕ್ಕೆ ಬಿದ್ದು ಗಾಂಜಾ ಪೆಡ್ಲಿಂಗ್ ಶುರು ಮಾಡಿದ್ದನು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 


Spread the love

LEAVE A REPLY

Please enter your comment!
Please enter your name here