ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳೇ ಟಾರ್ಗೆಟ್ ಮಾಡಿ ಹ್ಯಾಂಡ್ ಲಾಕ್ ಮುರಿದು ಕ್ಷಣಮಾತ್ರದಲ್ಲೇ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನರಸಿಂಹ ಹಾಗೂ ದರ್ಶನ್ ಬಂಧಿತ ಆರೋಪಿಗಳಾಗಿದ್ದು,
Advertisement
ಪೊಲೀಸರು 20 ಲಕ್ಷ ಮೌಲ್ಯದ 16 ಬೈಕ್ ವಶಕ್ಕೆ ಪಡೆದಿದ್ದಾರೆ. ಮೋಜು ಮಸ್ತಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದರು. ಗಾಡಿ ಡಾಕ್ಯುಮೆಂಟ್ಸ್ ಕೇಳಿದ್ರೆ ಲೋನ್ ಇದೆ. ಲೋನ್ ಕ್ಲಿಯರ್ ಅದ್ಮೇಲೆ ಗಾಡಿ ಡಾಕ್ಯುಮೆಂಟ್ಸ್ ಕೊಡ್ತೀವಿ ಅಂತಿದ್ರು. ಈ ರೀತಿ ಸುಳ್ಳು ಹೇಳಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿ, ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.