ಬೆಂಗಳೂರು: ಆರೋಪಿ ಮಹಿಳೆ ನನ್ನ ಸ್ನೇಹಿತೆ ಅಲ್ಲ, ಅದೆಲ್ಲವೂ ಸುಳ್ಳು ಮಾಹಿತಿ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ. ವರ್ತೂರ್ ಪ್ರಕಾಶ್ ಹೆಸರಲ್ಲಿ ಜ್ಯುವೆಲರಿ ಶಾಪ್ಗೆ ವಂಚಿಸಿದ ಕೇಸ್ನಲ್ಲಿ ಆರೋಪಿ ಶ್ವೇತಾ ಗೌಡ ಬಂಧನ ಆಗಿದೆ. ಬಂಧನದ ಭೀತಿಯಲ್ಲಿರುವ ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದರು. ನಂತರ ಮಾತನಾಡಿದ ಅವರು,
ಆರೋಪಿ ಮಹಿಳೆ ನನ್ನ ಸ್ನೇಹಿತೆ ಅಲ್ಲ, ಅದೆಲ್ಲವೂ ಸುಳ್ಳು ಮಾಹಿತಿ. ಐದಾರು ತಿಂಗಳ ಹಿಂದೆ ಆಕೆಯ ಪರಿಚಯವಾಗಿದ್ದು ನಿಜ. ರಾಜಕಾರಣಿಗಳು ಎಂದಮೇಲೆ ಬೇರೆ ಬೇರೆ ಜನರು ಭೇಟಿಯಾಗುವುದು ಸಹಜ. ಆದರೆ, ನನ್ನ ಹೆಸರು ಬಳಸಿಕೊಂಡು ಆಕೆ ಚಿನ್ನಾಭರಣ ಪಡೆದು ವಂಚಿಸಿರುವುದು ಪೊಲೀಸರ ಮೂಲಕವೇ ನನಗೆ ತಿಳಿಯಿತು.
ಆಕೆಯ ಮಾತು ನಂಬಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಹೇಗೆ ಕೊಟ್ಟರೋ ನನಗೆ ಗೊತ್ತಿಲ್ಲ. ನನ್ನಂಥೆಯೇ ಕೆಲ ರಾಜಕಾರಣಿಗಳ ಹೆಸರು, ಫೋಟೋ ತೆಗೆದುಕೊಂಡು ಆಕೆ ವಂಚನೆ ಮಾಡಿದ್ದಾಳೆ ಎಂದು ಕೆಲವು ದೂರುಗಳು ಬಂದಿವೆಯಂತೆ. ಪೊಲೀಸರ ವಿಚಾರಣೆ ವೇಳೆ ಎಲ್ಲಾ ಮಾಹಿತಿಯನ್ನ ಕೊಟ್ಟಿದ್ದೇನೆ ಎಂದರು.