HomeKarnataka Newsಬೆಂಗಳೂರಿನ ವಾತಾವರಣ ದೇಶದಲ್ಲಿ ಎಲ್ಲೂ ಸಿಗಲ್ಲ: ರಾಮಲಿಂಗಾರೆಡ್ಡಿ!

ಬೆಂಗಳೂರಿನ ವಾತಾವರಣ ದೇಶದಲ್ಲಿ ಎಲ್ಲೂ ಸಿಗಲ್ಲ: ರಾಮಲಿಂಗಾರೆಡ್ಡಿ!

For Dai;y Updates Join Our whatsapp Group

Spread the love

ಬೆಂಗಳೂರು:– ಬೆಂಗಳೂರಿನ ವಾತಾವರಣ ದೇಶದಲ್ಲಿ ಬೇರೆ ಎಲ್ಲೂ ಸಿಗಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಕೊಟ್ಟಿದ್ದಾರೆ. ಚಿಕ್ಕಪೇಟೆಯ ಮಾವಳ್ಳಿಯಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಲಾರ್ಪಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಕೆಂಪೇಗೌಡ ಅವರ ಕಾಲದಲ್ಲಿ ಬೆಂಗಳೂರು ದಾಟಬಾರದು ಅಂತ ನಾಲ್ಕು ಗೋಪುರ ಕಟ್ಟಿದ್ದರು.

ಆದರೆ ಇಂದು ಬೆಂಗಳೂರು ಬೃಹತ್ ಆಕಾರದಲ್ಲಿ ಬೆಳೆದಿದೆ. ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗಿದೆ. ಬೆಂಗಳೂರಿನ ಮೊದಲನೇ ಕೆಂಪೇಗೌಡ ಪ್ರತಿಮೆ ಬಿಬಿಎಂಪಿಯಲ್ಲಿ ಇತ್ತು. ಇದು ಬೆಂಗಳೂರಿಗೆ ಎರಡನೇ ಪ್ರತಿಮೆ. ಬೆಂಗಳೂರಿನ ಎರಡನೇ ಅಶ್ವಾರೂಡ ಕೆಂಪೇಗೌಡ ಪ್ರತಿಮೆ ನಾನು ಜಯನಗರ ಶಾಸಕರಿದ್ದಾಗ ಮಾಡಿದ್ದು. ಆವತ್ತು ಕೆಂಪೇಗೌಡ ದಿನಾಚರಣೆ ಆಚರಣೆ ಮಾಡುತ್ತಿರಲಿಲ್ಲ. ಆವಾಗ ನಾವು ಅಶ್ವಾರೂಡ ಪ್ರತಿಮೆ ನಿರ್ಮಾಣ ಮಾಡಿದ್ವಿ.

ಸಿಎಂ‌ ಆಗಿದ್ದಾಗ ಧರ್ಮಸಿಂಗ್ ಉದ್ಘಾಟನೆ ಮಾಡಿದ್ರು. ಆಡಳಿತಕ್ಕೆ ಕೆಂಪೇಗೌಡರು ಹೆಚ್ಚು ಒತ್ತು ನೀಡಿದ್ರು. ಪ್ರತಿಮೆ ಆಗಲು ಉದಯ್ ಶಂಕರ್ ಸೇರಿದಂತೆ ಗ್ರಾಮಸ್ಥರು ಬಹಳಷ್ಟು ಶ್ರಮಿಸಿದ್ದಾರೆ. ಈಗ ಬೇಕಾದಷ್ಟು ಪ್ರತಿಮೆ ಇದೆ ಆದರೆ ಆವತ್ತು ಎರಡನೇ ಪ್ರತಿಭಟನೆ ನಿರ್ಮಾಣ ಮಾಡಿದ್ವಿ. ಕೆಂಪೇಗೌಡರು ದೂರ ದೃಷ್ಟಿ ಇರುವವರು. ಇಂತವರನ್ನ ಸ್ಮರಣೆ ಮಾಡುವುದು ಬಹಳ ಒಳ್ಳೆಯ ಕೆಲಸ.

ಆ ಕಾಲದಲ್ಲಿ ಇಷ್ಟೊಂದು ಬೆಂಗಳೂರು ಬೆಳೆದಿರಲಿಲ್ಲ. ಈ ಬೃಹತ್‌ ಆಗಿ ಬೆಂಗಳೂರು ಬೆಳೆದಿದೆ. ಬೆಂಗಳೂರಿನಲ್ಲಿ ಸಮಸ್ಯೆಗಳು ಜಾಸ್ತಿ ಇದೆ. ಬೆಂಗಳೂರು ಸುಂದರವಾದ ನಗರ ಆಗಿತ್ತು. ಕಸದ ಸಮಸ್ಯೆ ಇರ್ಲಿಲ್ಲ, ನಾವೆಲ್ಲರೂ ಕಾಲೇಜು ದಿನಗಳಲ್ಲಿ ಸತತ ಮೂರ್ನಾಲ್ಕು ಗಂಟೆಗಳ ಮಳೆ ಬರ್ತಿತ್ತು. ಟ್ರಾಫಿಕ್ ಸಮಸ್ಯೆ ಇರ್ಲಿಲ್ಲ, ನಾನು ಪಾಲಿಕೆ ಸದಸ್ಯ ಇದ್ದಾಗ 15 ಲಕ್ಷ ಅಷ್ಟೇ ಜನ ಸಂಖ್ಯೆ ಇತ್ತು.

ಬಹಳ ಸುಂದರವಾದ ನಗರ ಇತ್ತು. ಜನಸಂಖ್ಯೆ ಬೆಳೆಯುತ್ತಾ ಸಮಸ್ಯೆ ಜಾಸ್ತಿ ಆಗಿದೆ. ಇದಕ್ಕೆ ಸರ್ಕಾರ ಪರಿಹಾರ ಮಾಡಬೇಕು. ಈಗಾಗಲೇ ಬೇಕಾದಷ್ಟು ಪ್ರತಿಮೆ ಇದೆ. ಮೊದಲು ಬಿಬಿಎಂಪಿ ‌ಮಾಡಿತ್ತು, ಎರಡನೇ ಪ್ರತಿಮೆ ನಾವು ಮಾಡಿದ್ವಿ. ಕೆಂಪೇಗೌಡರ ಕನಸು ಈಗ ನನಸಾಗಿದೆ. ಬೆಂಗಳೂರಿನ ವಾತಾವರಣ ದೇಶದಲ್ಲಿ ಎಲ್ಲೂ ಸಿಗಲ್ಲ ಎಂದು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!