ಬಾಹುಬಲಿ ಸಿನಿಮಾದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರೋ ನಟ ಪ್ರಭಾಸ್ ಕೊನೆಗೂ ಮದುವೆಯಾಗೋಕೆ ಮನಸ್ಸು ಮಾಡಿದ್ದಾರೆ. ವಯಸ್ಸು 40 ದಾಟಿದರೂ ಪ್ರಭಾಸ್ ಮಾತ್ರ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣಲಿಲ್ಲ. ಇದೀಗ ಕೊನೆಗೂ ಪ್ರಭಾಸ್ ಮದುವೆಯಾಗೋಕೆ ಮುಂದಾಗಿದ್ದಾರೆ. ಖ್ಯಾತ ಉದ್ಯಮಿ ಮಗಳ ಜೊತೆ ಪ್ರಭಾಸ್ ಕಲ್ಯಾಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಸ್ಟಾರ್ ಸಾಲು ಸಾಲು ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿ ಇರುವ ಪ್ರಭಾಸ್ ಅವರು ಮೋಸ್ಟ್ ಬ್ಯಾಚುಲರ್. ಡಾರ್ಲಿಂಗ್ಗೆ 45 ವರ್ಷಗಳು ತುಂಬಿದ್ದರೂ ಇನ್ನು ಅವರಿಗೆ ಕಂಕಣಭಾಗ್ಯ ಎನ್ನುವುದು ರೀಲ್ ಮಾತ್ರ, ರಿಯಲ್ನಲ್ಲಿ ಇಲ್ಲ ಎಂದು ಹೇಳಲಾಗುತ್ತಿತ್ತು. ಸದ್ಯ ಇದಕ್ಕೆ ಫುಲಿಸ್ಟಾಪ್ ಬೀಳುವ ಸಂಭವ ಬಂದಿದ್ದು ಡಾರ್ಲಿಂಗ್ ಪ್ರಭಾಸ್ ವಿವಾಹ ಆಗೋ ಕಾಲ ಕೂಡಿ ಬಂದಿದೆ ಎನ್ನಲಾಗುತ್ತಿದೆ.
ಈ ಹಿಂದೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಇಬ್ಬರ ಮದುವೆಯನ್ನು ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗಲೆ ಇಲ್ಲ. ಇದೀಗ ಪ್ರಭಾಸ್ ಉದ್ಯಮಿ ಮಗಳ ಜೊತೆ ಮದುವೆಗೆ ಸಿದ್ದವಾಗಿದ್ದು ಇದು ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಖ್ಯಾತ ಉದ್ಯಮಿಯ ಮಗಳನ್ನು ಪ್ರಭಾಸ್ ಮದುವೆಯಾಗುತ್ತೀದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಪ್ರಭಾಸ್ ಆಪ್ತರು ಮಾತ್ರ ಇದು ಸುಳ್ಳು ಸುದ್ದಿ ಎನ್ನುತ್ತಿದ್ದಾರೆ.