ಧಾರವಾಡ: ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಲೇಔಟ್ ವೊಂದರಲ್ಲಿ ನಡೆದಿದೆ.
ಹರೀಶ್ ಶಿಂಧೆ (30) ಮೃತ ದುರ್ಧೈವಿಯಾಗಿದ್ದು, ವೃತ್ತಿಯಲ್ಲಿ ಟೈಲ್ಸ್ ಕೆಲಸ ಮಾಡಿಕ್ಕೊಂಡಿದ್ದನು.
ನಿನ್ನೆ ರಾತ್ರಿ ಕೆಲಸ ಬಿಟ್ಟಿರೋನು ಮನೆಗೆ ಬಾರದ ಹಿನ್ನಲೆ ಬೆಳಿಗ್ಗೆ ಪೋಲಿಸರೇ ಮನೆಯವರಿಗೆ ಮಾಹಿತಿ ಕೊಟ್ಟ ಬಳಿಕ ಕೊಲೆಯ ಬಗ್ಗೆ ಮನೆಯವರಿಗೆ ಗೊತ್ತಾಗಿದೆ.
ಸ್ಥಳಕ್ಕೆ ಎಸ್ಪಿ ಗೋಪಾಲ್ ಬ್ಯಾಕೋಡ, ಎ ಎಸ್ ಪಿ ನಾರಾಯಣ ಭರಮನಿ, ಸಿಪಿಐ ಕಮತಗಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಇನ್ನೂ ಘಟನೆ ಸಂಬಂಧ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



