ಕನ್ನಡದ ಖ್ಯಾತಿ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿ ಕೆಲ ವಾರಗಳಷ್ಟೇ ಕಳೆದಿದೆ. ದಿನದಿಂದ ದಿನಕ್ಕೆ ದೊಡ್ಮನೆ ರಣರಂಗವಾಗಿ ಮಾರ್ಪಡಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ರಾಶಿಕಾ ಹಾಗೂ ರಕ್ಷಿತಾ ಮಧ್ಯೆ ನಾಮಿನೇಷನ್ ಗಲಾಟೆ ನಡೆದಿತ್ತು. ಇದೀಗ ಅಶ್ವಿನಿಗೌಡ ಹಾಗೂ ಕಾವ್ಯ ಮಧ್ಯೆ ದೊಡ್ಡ ರಣರಂಗ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿ ಕೆಲಸ ಡಿವೈಡ್ ಮಾಡೋ ವಿಚಾರಕ್ಕೆ ಗಲಾಟೆ ನಡೆದಿದೆ. ಕಾವ್ಯ, ಗಿಲ್ಲಿ ಜೊತೆಗೆ ಕೆಲಸ ಮಾಡ್ತೀನಿ ಅಂದಿದ್ದಾರೆ. ಆವಾಗ ಅಡಿಗೆ ಕೆಲಸ ಮಾಡಿ ಗಿಲ್ಲಿ ನಟನ ಜೊತೆಗೆ ವಾಶ್ರೂಮ್ ಕ್ಲೀನ್ ಮಾಡ್ತಿನೀ ಅಂದ್ರೆ ಹೇಗೆ ಆಗುತ್ತೆ ಅಂತಾ ಅಶ್ವಿನಿ ವಾಗ್ವಾದ ನಡೆಸಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಕಾವ್ಯ ಬೇರೆಯವರ ವಿಚಾರಕ್ಕೆ ನೀವು ಬರಬೇಡಿ ಎಂದು ವಾದಿಸಿದ್ದಾರೆ.
ಇದಕ್ಕೆ ಅಶ್ವಿನಿ ಹೇಯ್ ಅಂತಾ ಎಲ್ಲಾ ಕೈ ತೋರಿಸ್ಬೇಡ ಅಂತಾ ಗಲಾಟೆ ಮಾಡಿದ್ದಾರೆ. ಅಶ್ವಿನಿ ಗೌಡ ಮತ್ತು ಕಾವ್ಯ ಇಬ್ಬರೂ ಕೈ ಕೈ ಮಿಲಾಯಿಸೋವರೆಗೆ ಹೋಗಿದ್ದರು. ಆದರೆ ಮಿಲಾಯಿಸಿಲ್ಲ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಅವರು ರಕ್ಷಿತಾ ಎಸ್ ಕ್ಯಾಟಗರಿ ಸೇರಿರೊದು ಎಂದು ಪದಬಳಕೆ ಮಾಡಿದ್ದರು. ಇದ್ರಿಂದ ಸಿಡಿದೆದ್ದ ಹಿರಿಯ ವಕೀಲ ಪ್ರಶಾಂತ್ ಮೆತಲ್ ಎಂಬುವವರು ಅಶ್ವಿನಿ ಗೌಡ ವಿರುದ್ಧ ಜಾತಿ ನಿಂದನೆ, ವ್ಯಕ್ತಿ ನಿಂದನೆ ಆರೋಪದಡಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.