ಬೆಂಗಳೂರು:- ಸ್ವಯಂ ಅಪಘಾತಕ್ಕೆ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಬಲಿಯಾಗಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಬಳಿ ಇಂದು ಮಧ್ಯಾಹ್ನ 1:40 ರ ಸುಮಾರಿಗೆ ನಡೆದಿದೆ.
Advertisement
ದಯಾನಂದ್ ಸಾಗರ್ ನಲ್ಲಿ ಡಿಪ್ಲೋಮಾ ಓದುತ್ತಿದ್ದ 17 ವರ್ಷದ ಮನೋಜ್, ಮತ್ತು 17 ವರ್ಷದ ಹೃತ್ವಿಕ್ ಮೃತರು.
ಮೃತರಿಬ್ಬರು ಕಾಲೇಜ್ ನಿಂದ ಯಮಹಾ ಬೈಕ್ ನಲ್ಲಿ ಹೊರಟಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕುಸಿದು ಬಿದ್ದಿದ್ದಾರೆ.
ಕೂಡಲೇ ಇಬ್ಬರನ್ನ ಖಾಸಗಿ ಆಸ್ಪತ್ರೆಗೆ ಸ್ಥಳೀಯರು, ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ.
ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.