ಚಿಕ್ಕಬಳ್ಳಾಪುರ:- ಕೃಷಿ ಹೊಂಡದಲ್ಲಿ 23 ವರ್ಷದ ಯುವಕನ ಶವ ಪತ್ತೆಯಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ಜರುಗಿದೆ.
Advertisement
ಮೃತ ಯುವಕನನ್ನು ವಿನಾಯಕ ಎಂದು ಗುರುತಿಸಲಾಗಿದೆ. ಮೈಲಾಪುರ ಗ್ರಾಮದ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದೆ.
ಕೃಷಿ ಹೊಂಡದ ಬಳಿ ಮೊಬೈಲ್, ಬೈಕ್, ಚಪ್ಪಲಿ ಪತ್ತೆ ಆಗಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಯುವಕನ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.
ಹೀಗಾಗಿ ಪೊಲೀಸರಿಂದ ತನಿಖೆ ಮುಂದುವರಿದಿದೆ.