ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಟೆಕ್ಕಿ ಶವ ಪತ್ತೆ: ಪತಿ ಮೇಲೆ ಶಂಕೆ!?

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನ ವಿವೇಕನಗರ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಟೆಕ್ಕಿ ಶವ ಪತ್ತೆಯಾದ ಘಟನೆ ಜರುಗಿದೆ.

Advertisement

27 ವರ್ಷದ ಮೇಘನಾ ಶೆಟ್ಟಿ ಮೃತ ಮಹಿಳೆ ಎನ್ನಲಾಗಿದೆ. ಮೇಘನಾ ಅವರು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ತೀರ್ಥಹಳ್ಳಿಯ ಮೂಲದ ಇಂಜಿನಿಯರ್ ಸುದೀಪ್ ಶೆಟ್ಟಿ ಜೊತೆ ವಿವಾಹವಾಗಿತ್ತು. ಜೊತೆಗೆ ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಸಹ ಇದೆ.

ಎಲ್ಲವೂ ಚೆನ್ನಾಗಿದ್ದ ಕುಟುಂಬದಲ್ಲಿ ಇತ್ತೀಚೆಗೆ ಪದೇಪದೆ ಹಣಕ್ಕಾಗಿ ಪತಿ ಕುಟುಂಬದಿಂದ ಕಿರುಕುಳ ನೀಡುತ್ತಿದ್ದು, ನಿನ್ನೆ ರಾತ್ರಿ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ಇಂದು ಬೆಳಗ್ಗೆ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವಿವೇಕನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮೃತ ಮೇಘನಾ ಪೋಷಕರು, ಆಕೆಯ ಪತಿ ಸುದೀಪ್ ಕೊಲೆ ಮಾಡಿದ್ದಾನೆ. ಜೊತೆಗೆ ಸುದೀಪ್ ಪೋಷಕರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೇಘನಾ ಪತಿ ಸುದೀಪ್​ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here