ಕಿರುತೆರೆಯ ಖ್ಯಾತ ನಿರೂಪಕಿ ಕಂ ನಟಿ ಅನುಶ್ರೀ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಡಗು ಮೂಲದ ರೋಷನ್ ಎಂಬುವವರ ಜೊತೆ ಅನುಶ್ರೀ ಹಸೆಮಣೆ ಏರುತ್ತಿದ್ದಾರೆ. ಅನುಶ್ರೀ ಹಾಗೂ ರೋಷನ್ ಮದುವೆ ಆಗಸ್ಟ್ 28 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎನ್ನಲಾಗಿದೆ. ಅಂದ ಹಾಗೆ ಇದು ಪಕ್ಕಾ ಅರೆಜ್ ಮ್ಯಾರೇಜ್ ಆಗಿದ್ದು ಮನೆಯವರ ನೋಡಿದ ಸಂಬಂಧವಂತೆ.
ಅನುಶ್ರಿ ಮದುವೆ ಆಗೋ ಹುಡುಗ ಅಪ್ಪಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಂತೆ. ಅನುಶ್ರೀ ಕೂಡ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ. ಈ ಹಿಂದೆ ಪುನೀತ್ ನಿವಾಸದಲ್ಲಿ ಅನುಶ್ರೀ ಹಾಗೂ ರೋಷನ್ ಪರಿಚಯವಾಯ್ತು ಅನ್ನೋ ಮಾಹಿತಿ ಇದೆ ಲಭ್ಯವಾಗಿದೆ. ಪುನೀತ್ ನಿರ್ಮಿಸಿದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಪ್ರೀ ರಿಲೀಸ್ ಈವೆಂಟ್‌ನ ನಿರ್ವಹಣೆ ಕೂಡ ರೋಷನ್ ಮಾಡಿದ್ದರಂತೆ. ಇದೇ ವೇಳೆ ಇಬ್ಬರ ಮಧ್ಯೆ ನಂಟು ಬೆಳೆದಿದೆ ಎನ್ನಲಾಗುತ್ತಿದೆ.
ಯುವ ರಾಜ್ ಕುಮಾರ್‌ರ ಮಾಜಿ ಪತ್ನಿ ಶ್ರೀದೇವಿಗೂ ರೋಷನ್ ಆಪ್ತ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



