ಕಲಬುರಗಿ: ಮೂರು ದಿನಗಳಿಂದ ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ಕಲಬುರಗಿ ಹೊರವಲಯದ ಕೋಟನೂರು ಡಿ ಗ್ರಾಮದಲ್ಲಿ ನಡೆದಿದೆ. 10 ವರ್ಷದ ಶೇಖರ್ ಮೃತ ದುರ್ದೈವಿಯಾಗಿದ್ದು, ನಾಲ್ಕನೇ ತರಗತಿ ಓದುತಿದ್ದ ಬಾಲಕನನ್ನ ಎಲ್ಲಾ ಕಡೆ ಹುಡುಕಲಾಗಿತ್ತು.
ಆದ್ರೆ ಮನೆಯ ಪಕ್ಕದ ಖಾಲಿ ಫ್ಲಾಟ್ನಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕ ಆಟವಾಡುತ್ತಾ ಚೇಬಂರ್ಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಪ್ಲಾಟ್ ಮಾಲೀಕ ಹಾಗೂ ಪಾಲಿಕೆ ವಿರುದ್ದ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ.



