ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಂದಿನ ದಿನಗಳಲ್ಲಿ ಮದುವೆ ಎಂದರೆ ಯಾರಿಗೂ ಸಾಮಾನ್ಯದ ಮದುವೆಯ ಕಲ್ಪನೆಯೇ ಬರುವುದಿಲ್ಲ. ಈಗ ಏನಿದ್ದರೂ ದುಬಾರಿಯ ಮತ್ತು ಆಡಂಬರದ ಮದುವೆಗಳೇ ಹೆಚ್ಚು. ಆದರೆ ಈಚೆಗೆ ಸಮೀಪದ ಜಕ್ಕಲಿಯಲ್ಲೊಂದು ಸಾಮಾನ್ಯದ ಮದುವೆ ನಡೆದು ಎಲ್ಲರ ಗಮನ ಸೆಳೆಯಿತು.
Advertisement
ಜಕ್ಕಲಿಯ ಸಂಕನೂರು ಮನೆತನದ ಮದುವೆ ಇಂತಹದ್ದೊAದು ವಿದ್ಯಮಾನಕ್ಕೆ ಸಾಕ್ಷಿಯಾಯಿತು.
ಸಂಕನೂರ ಮನೆತನದ ಸುರೇಶ ಸಂಕನೂರ ದಂಪತಿಗಳ ಮಕ್ಕಳಾದ ಸುನಿಲ್ ಮತ್ತು ಸಂಜೀವ್ ಅವರ ಮದುವೆ ಜಕ್ಕಲಿಯ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ನಡೆಯಿತು. ಮದುವೆಯ ಹಿಂದಿನ ರಾತ್ರಿ ವಿಳೆ ಕಾರ್ಯಕ್ಕೆ ವಧೂ-ವರರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಅನ್ನದಾನೇಶ್ವರ ಮಂಟಪದವರೆಗೆ ಅಲಂಕೃತ ಬಂಡಿ ಗಾಡಿಯ ಮೆರವಣಿಗೆಯಲ್ಲಿ ಬಂದರು. ಅವರ ಈ ಸರಳತೆ ಎಲ್ಲರ ಗಮನ ಸೆಳೆಯಿತು.