ವಿಜಯಸಾಕ್ಷಿ ಸುದ್ದಿ, ನರಗುಂದ
Advertisement
ಸಿಎಂ ಸಿದ್ದರಾಮಯ್ಯ ಮಂಡಿಸಿದ ಆಯವ್ಯಯವು ಐತಿಹಾಸಿಕವಾಗಿದ್ದು, ದೂರದೃಷ್ಟಿಯಿಂದ ಕೂಡಿದೆ. ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಪ್ರತಿ ಮನೆಯನ್ನು ತಲುಪುವ ಮೂಲಕ ಯುವಕರಿಗೆ, ಶಿಕ್ಷಣಕ್ಕೆ, ಔದ್ಯೋಗಿಕರಣಕ್ಕೆ, ಮಹಿಳೆಯರಿಗೆ, ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ ಎಂದು ನರಗುಂದ ಬ್ಲಾಕ್‌ನ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಂಯೋಜಕ ಪ್ರವೀಣ ಸಂಗಳದಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಬೆನ್ನಲ್ಲೇ ಕಲಬುರಗಿಯಲ್ಲಿ ಬಸವಾದಿ ಶರಣರ ವಚನಗಳನ್ನು ಜಗತ್ತಿಗೆ ಪಸರಿಸುವ ದೃಷ್ಟಿಯಿಂದ `ವಚನ ಮಂಟಪ’ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ.
ರಾಜ್ಯದ ಸರ್ವ ಧರ್ಮದ ಜನರನ್ನು ಸಮಾನವಾಗಿ ಕರೆದೊಯ್ಯುವ ದೃಷ್ಟಿಯಿಂದ ಎಲ್ಲರನ್ನೂ ಒಳಗೊಂಡ ಎಲ್ಲ ವರ್ಗದ ಜನರಿಗೂ ಉಪಯೋಗಕಾರಿಯಾಗುವ ಅತ್ಯುತ್ತಮ ಆಯವ್ಯಯ ಇದಾಗಿದೆ ಎಂದಿದ್ದಾರೆ.