ಊರಿಗೆ ಹೋಗಲು ಸಿಗದ ಬಸ್: ಕೋಪಗೊಂಡು ಕಲ್ಲು ಎಸೆದ ಪ್ರಯಾಣಿಕ ಅರೆಸ್ಟ್!

0
Spread the love

ರಾಯಚೂರು:- ಶಕ್ತಿ ಯೋಜನೆ ಜಾರಿ ಆದ ಮೇಲೆ ಬಸ್ ನಲ್ಲಿ ಓಡಾಡೋದೆ ಕಷ್ಟ ಆಗಿಬಿಟ್ಟಿದೆ. ಒಂದು ಸರಿಯಾದ ಸಮಯಕ್ಕೆ ಬಸ್ ಇಲ್ಲ, ಮತ್ತೊಂದು ಕಡೆ ಬರುವ ಬಸ್ ಗಳೆಲ್ಲಾ ತುಂಬು ರಶ್ ನಲ್ಲೇ ಬರುತ್ತಿದ್ದು, ಪ್ರಯಾಣಿಕರನ್ನು ಕೆರಳಿಸುವಂತೆ ಮಾಡಿದೆ.

Advertisement

ಅದರಂತೆ ಊರಿಗೆ ಹೋಗಲು ಬಸ್ ಸಿಗಲಿಲ್ಲ ಎಂದು ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ತಿಮ್ಮಣ್ಣ ಬಂಧಿತ ಆರೋಪಿ. ಲಿಂಗಸುಗೂರಿನ ಗೋಲಪಲ್ಲಿಯ ಗ್ರಾಮದ ಬಳಿ ನ.19ರ ಬೆಳಗಿನ ಜಾವ 2ರ ವೇಳೆ ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ. ಕಲ್ಲು ತೂರಾಟದಲ್ಲಿ ಮೂರು ಸಾರಿಗೆ ಬಸ್, ಕಾರು ಹಾಗೂ ಲಾರಿಗಳ ಗಾಜುಗಳು ಒಡೆದು ಹೋಗಿದ್ದವು. ಅಲ್ಲದೇ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಈ ಘಟನೆ ಪೊಲೀಸರಿಗೆ ತಲೆನೋವಾಗಿತ್ತು. ಕಳ್ಳತನ ಮಾಡಲು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು. ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಬಂಧಿತ ಆರೋಪಿ ತನ್ನ ಅಕ್ಕ, ಬಾವನನ್ನ ಬೆಂಗಳೂರಿಗೆ ಕಳುಹಿಸಲು ಬಸ್ ಸಿಗದೆ ಬೇಸರಗೊಂಡಿದ್ದ. ಬಳಿಕ ತನ್ನ ಮೂರು ಜನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಬೆಳಗಿನ ಜಾವ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದರು.

ಸಧ್ಯ ಓರ್ವರನ್ನು ಬಂಧಿಸಿದ್ದು, ಉಳಿದವರು ಎಸ್ಕೇಪ್ ಆಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here