ಖ್ಯಾತ ನಟ ಸೋನು ಸೂದ್ ಪತ್ನಿ ಸೊನಾಲಿ ಸೂದ್ ಚಲಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದೆ. ಮುಂಬೈ-ನಾಗಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು ಸೊನಾಲಿ ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸೊನಾಲಿ ಸೂದ್ ಜೊತೆ ಅವರ ಸಹೋದರಿ ಹಾಗೂ ಸಹೋದರಿಯ ಮಗ ಕೂಡ ಇದ್ದರು. ಈ ಮೂವರ ಹೆಲ್ತ್ ಅಪ್ಡೇಟ್ ಇನ್ನಷ್ಟೇ ಬರಬೇಕಿದೆ. ಸೊನಾಲಿ ಸೂದ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಸೋನಾಲಿ ಸೂದ್ ಹಾಗೂ ಅವರ ಸಹೋದರಿಯ ಮಗನನ್ನು ನಾಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರಿಗೂ ತೀವ್ರ ಗಾಯಗಳಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಸೊನಾಲಿ ಸೂದ್ ಅವರ ಸಹೋದರಿಗೆ ಸಣ್ಣ ಪುಟ್ಟ ಗಾಯಗಳು ಆಗಿವೆ. ಆದರೆ ಸೊನಾಲಿ ಮತ್ತು ಸಹೋದರಿಯ ಪುತ್ರನಿಗೆ ಗಂಭೀರ ಗಾಯಗಳಾಗಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸದ್ಯ ನಟ ಸೋನು ಸೂದ್ ಶೂಟಿಂಗ್ ಸ್ಥಗಿತಗೊಳಿಸಿ ಆಸ್ಪತ್ರೆಗೆ ತೆರಳಿದ್ದಾರೆ.