ಖ್ಯಾತ ಹಾಸ್ಯ ನಟ ಯೋಗಿ ಬಾಬು ಚಲಿಸುತ್ತಿದ್ದ ಕಾರು ಭೀಕರ ಅಪಘಾತ

0
Spread the love

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಯೋಗಿ ಬಾಬು ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಭಾನುವಾರ ಮುಂಜಾನೆ ವಾಲಾಜಪೇಟೆ ಟೋಲ್ ಪ್ಲಾಜಾ ಬಳಿ ನಟ ಯೋಗಿ ಬಾಬು ಅವರ ಕಾರು ಅಪಘಾತಕ್ಕೀಡಾಗಿದ್ದು, ವಾಹನವು ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.

Advertisement

ಕಾರು ಅಪಘಾತದ ದ್ಯಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿವೆ. ಅಪಘಾತದಲ್ಲಿ ನಟ ಯೋಗಿ ಬಾಬು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ. ಯೋಗಿ ಬಾಬು ಅವರ ವಾಹನ ಕಂಟ್ರೋಲ್‌ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು ಘಟನೆಯಲ್ಲಿ ಯೋಗಿ ಬಾಬು ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಹೇಳಲಾಗುತ್ತಿದೆ.

ಘಟನೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಯೋಗಿ ಬಾಬು, ಯಾವುದೇ ವಂದಂತಿಗಳನ್ನು ನಂಬಬೇಡಿ. ನಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ.

“ಅದು ಯಾವುದೋ ಕಂಪನಿ ಕಾರು. ಬ್ಯಾರಿಕೇಡ್‌ಗೆ ಚೂರು ತಾಗಿ ಘಟನೆ ನಡೆದಿದೆ ಅಷ್ಟೇ. ಎಲ್ಲರೂ ಕ್ಷೇಮವಾಗಿದ್ದೇವೆ, ಯಾರಿಗೂ ಯಾವುದೇ ಅನಾಹುತ ನಡೆದಿಲ್ಲ. ನಾನು ಅಲ್ಲಿ ಏನಾಗಿದೆ ಎಂಬುದನ್ನು ನೋಡಿ ಕೊನೆಗೆ ಎಲ್ಲರನ್ನೂ ಅಲ್ಲಿಂದ ಕಳಿಸಿಕೊಟ್ಟೆವು ಎಂದು ಯೋಗಿ ಬಾಬು ಅವರು ಸ್ಪಷ್ಟನೆ ನೀಡಿದ್ದಾರೆ. ಸುಮ್ಮನೆ ಈ ಬಗ್ಗೆ ಏನೇನೋ ವದಂತಿಗಳು ಹಬ್ಬುತ್ತಿದೆ. ಅದೆಲ್ಲವೂ ಸುಳ್ಳು, ದಯವಿಟ್ಟು ಯಾರೂ ವದಂತಿಗಳನ್ನು ನಂಬಬೇಡಿ” ಎಂದು ಯೋಗಿ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here