ರೈತರ ಬಂಧನ ಕೇಂದ್ರದ ಹತಾಶೆಯ ಕ್ರಮ

0
Farmers protest image by vijayasakshi
Farmers protest image by vijayasakshi
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯದ ರೈತರನ್ನು ಮಧ್ಯಪ್ರದೇಶದ ಬೋಪಾಲ್‌ನಲ್ಲಿ ಬಂಧಿಸಿರುವುದು ಖಂಡನೀಯ. ಇದು ಕೇಂದ್ರ ಸರ್ಕಾರದ ಹತಾಶೆಯ ಕ್ರಮ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

Advertisement

ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಈಗಾಗಲೇ ಹತ್ತು ವರ್ಷಗಳ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತೆಗೆ ಶರಣಾಗಿದ್ದಾರೆ. ರೈತರ ಪ್ರಾಣದೊಂದಿಗೆ ಸರಕಾರ ಚೆಲ್ಲಾಟವಾಡುದನ್ನು ಕೂಡಲೇ ನಿಲ್ಲಿಸಬೇಕು. ರೈತರ ಈ ಹೋರಾಟಕ್ಕೆ ವೆಲ್‌ಫೇರ್ ಪಾರ್ಟಿ ಸಂಪೂರ್ಣವಾಗಿ ಬೆಂಬಲಿಸುತ್ತದೆ. ರೈತರ ಹೋರಾಟದ ಮುಂದೆ ತನ್ನ ಸರ್ವಾಧಿಕಾರಿ ಧೋರಣೆಯ ಆಟ ನಡೆಯದು ಎಂದು ಅರಿತಿರುವ ಕೇಂದ್ರ ಸರಕಾರ ಈ ಸಂಘಟನೆಗಳ ಒಗ್ಗಟ್ಟನ್ನು ಮುರಿಯಲು ಸಂಚು ಹೂಡುತ್ತಲೇ ಇದೆ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here