ವಿಜಯಸಾಕ್ಷಿ ಸುದ್ದಿ, ಗದಗ: ಯುವ ಉದ್ಯಮಿ ಸುನೀಲ್ ವೇರ್ಣೆಕರ್ ದಂಪತಿಗಳ ಪರೋಪಕಾರ ಗುಣ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಸುನಿಲ್ ವೇರ್ಣೆಕರ್ ದಂಪತಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊರಟ್ಟಿ, ಯುವ ಉದ್ಯಮಿಯಾಗಿ ಕೇವಲ ಲಾಭಕ್ಕಾಗಿ ಉದ್ಯೋಗ ಮಾಡದೆ ಅದರಲ್ಲಿ ಬಂದ ಕೆಲ ಲಾಭಾಂಶವನ್ನು ದಾನ-ಧರ್ಮ ಮಾಡುವ ಮೂಲಕ ಸಮಾಜದ ಋಣ ತೀರಿಸುತ್ತಿದ್ದಾರೆ. ನಾನು ದತ್ತು ಪಡೆದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಗೆ ಲಕ್ಷಾಂತರ ಹಣ ಖರ್ಚು ಮಾಡಿ ದ್ವಾರಬಾಗಿಲನ್ನ ನಿರ್ಮಿಸಿಕೊಟ್ಟಿದ್ದಾರೆ. ಸರ್ಕಾರಿ ಶಾಲೆಗಳಿಗೆ ಇಂತಹ ಸೌಲಭ್ಯ ಇರುವುದು ವಿರಳ. ಅಲ್ಲದೆ ಶಾಲೆಗೆ ಬೇಕಾದ ಪರಿಕರಗಳನ್ನೂ ಒದಗಿಸಿದ್ದಾರೆ. ಹೀಗಾಗಿ ದಂಪತಿಗಳನ್ನು ಅಭಿನಂದಿಸುತ್ತೇನೆ ಎಂದರು.
ಸುನಿಲ್ ವೇರ್ಣೆಕರ್ ಮಾತನಾಡಿ, ನಾಡು ಕಂಡ ಅಪರೂಪದ ಜನನಾಯಕ ಪರಿಷತ್ತಿನಲ್ಲಿ ಐತಿಹಾಸಿಕ ದಾಖಲೆ ಮಾಡಿದ ಸಭಾಪತಿ ಬಸವರಾಜ್ ಹೊರಟ್ಟಿ ದಂಪತಿಗಳನ್ನು ಗೌರವಿಸುವ ಭಾಗ್ಯ ಸಿಕ್ಕಿದ್ದು ನಮ್ಮ ಕುಟುಂಬದ ಪುಣ್ಯ. ಇವರ ಆಶೀರ್ವಾದ, ಮಾರ್ಗದರ್ಶನ, ಸಹಕಾರ ನನಗೆ ಹಾಗೂ ನನ್ನ ಕುಟುಂಬದ ಮೇಲೆ ಸದಾ ಇರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಡಾ. ಬಸವರಾಜ ಧಾರವಾಡ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ, ಪ್ರಭಾಕರ್ ವೇರ್ಣೆಕರ್, ಪ್ರಿಯಾ ವೇರ್ಣೆಕರ್, ಕುಮಾರ್ ಕಾರ್ತಿಕ್ ಸೇರಿದಂತೆ ದೈವಜ್ಞ ಸಮಾಜದ ಗುರು-ಹಿರಿಯರು ಉಪಸ್ಥಿತರಿದ್ದರು.


