ಚೆನ್ನೈ:- ಬಸ್ ಡ್ರೈವರ್ ಬ್ರೇಕ್ ಹಾಕುತ್ತಿದ್ದಂತೆ ತಾಯಿ ಮಡಿಲಿಂದ ಮಗು ಜಾರಿ ಬಿದ್ದಿರುವ ಘಟನೆ ಚೆನ್ನೈನಲ್ಲಿ ಜರುಗಿದೆ.
Advertisement
ಬಸ್ ನಲ್ಲಿ ತಾಯಿ ಮಗು ಪ್ರಯಾಣಿಸುತ್ತಿರುವಾಗ ಹಠಾತನೇ ಬ್ರೇಕ್ ಹಾಕಿದ ಪರಿಣಾಮ ಮೊದಲ ಬಸ್ ಮುಂಭಾಗದ ಫ್ರಂಟ್ ಸೀಟ್ನಲ್ಲಿ ಕುಳಿತಿದ್ದ ತಾಯಿಯ ಮಡಿಲಿನಲ್ಲಿದ್ದ ಮಗು ಜಾರಿ ಬಿದ್ದಿದೆ. ಇದಲ್ಲದೇ ಪಕ್ಕದಲ್ಲಿದ್ದ ವ್ಯಕ್ತಿ ಕೂಡ ಮಗುವಿನ ಸಮೇತ ಕೆಳಗೆ ಬಿದ್ದಿದ್ದಾರೆ.
ಬಸ್ ಹಠಾತ್ತನೆ ಬ್ರೇಕ್ ಹಾಕಿದ್ದರಿಂದಾಗಿ ತಕ್ಷಣಕ್ಕೆ ಹಿಡಿದುಕೊಳ್ಳಲು ಬೆಂಬಲಕ್ಕೇನು ಸಿಗದೆ ಎರಡು ವರ್ಷದ ಮಗುವಿನ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿಶುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿ ಆಗಿದೆ.