ಜಮೀನು ಮಾರಿದ್ದ ಹಣಕ್ಕಾಗಿ ರಾಡ್‌ನಿಂದ ಥಳಿಸಿ ಅಪ್ಪನನ್ನೆ ಕೊಂದ ಮಕ್ಕಳು…!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಜಮೀನು ಮಾರಿದ್ದ ಹಣಕ್ಕಾಗಿ ಹೆತ್ತ ಅಪ್ಪನನ್ನೇ ಮಕ್ಕಳಿಬ್ಬರು ಕಬ್ಬಿಣದ ರಾಡ್‌ನಿಂದ ಥಳಿಸಿ ಕೊಲೆಗೈದ ದಾರುಣ ಘಟನೆ ಜರುಗಿದೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ವಿವೇಕಾನಂದ ಕರೆಯಲ್ಲಪ್ಪನವರ್ (52) ಎಂಬಾತನನ್ನು ಮೊದಲ ಪತ್ನಿಯ ಮಕ್ಕಳಿಂದಲೇ ಕೊಲೆಗೀಡಾಗಿದ್ದಾನೆ.

ಕೊಲೆಗೀಡಾದ ವಿವೇಕಾನಂದಗೆ ತನ್ನ ಪಿತ್ರಾರ್ಜಿತ ಜಮೀನು ಮಾರಾಟದಿಂದ 1ಲಕ್ಷ 30ಸಾವಿರ ಹಣ ಬಂದಿತ್ತು. ಈ ಹಣಕ್ಕಾಗಿ ಕೊಲೆಯಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಹಣಕ್ಕಾಗಿ ಸಣ್ಣಪುಟ್ಟ ಗಲಾಟೆ ಆಗುತ್ತಿತ್ತು ಎಂದು ಎರಡನೇ ಪತ್ನಿ ರೇಖಾ ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಜಮೀನಿಗೆ ತೆರಳಿದಾಗ ಮೊದಲ ಪತ್ನ ಕಸ್ತೂರೆಮ್ಮನ ಮಕ್ಕಳು ಮನೆಯಲ್ಲಿ ಕೂಡಿ ಹಾಕಿ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವಿವೇಕಾನಂದನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಅಸುನೀಗಿದ್ದಾನೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಎಮ್.ಬಿ. ಸಂಕದ, ಡಿವೈಎಸ್ಪಿ ಜೆ.ಎಚ್.ಇನಾಮದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.


Spread the love

LEAVE A REPLY

Please enter your comment!
Please enter your name here