ನಗರದ ಶಿವಾಜಿ ಜಯಂತ್ಯುತ್ಸವ ರಾಜ್ಯದಲ್ಲಿಯೇ ಹೆಸರುವಾಸಿ: ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಛತ್ರಪತಿ ಶಿವಾಜಿ ಮಹಾರಾಜ-2025ರ ಜಯಂತ್ಯುತ್ಸವದ ಅಂಗವಾಗಿ ನಗರದ ರಾಚೋಟಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ವಿರೂಪಾಕ್ಷಪ್ಪ ಎಮ್.ಹೆಬ್ಬಳ್ಳಿ ಅವರನ್ನು ಶ್ರೀರಾಮ ಸೇನೆ ಸಂಘಟನೆಯ ಮುಖಂಡರು ಹಾಗೂ ಹಿಂದೂ ಬಾಂಧವರು ಸರ್ವಾನುಮತದಿಂದ ಆಯ್ಕೆ ಮಾಡಿದರು.

Advertisement

ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಪಿ., ಕಳೆದ ವರ್ಷ ಮಹಾರಾಜರ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಈ ಕಾರ್ಯಕ್ರಮ ಕೇವಲ ಒಂದು ಜಾತಿಗೆ ಸಿಮಿತವಾಗಿರದೆ, ಜಾತಿ ಮೀರಿ ಶಿವಾಜಿ ಜಯಂತಿ ಆಚರಿಸುತ್ತಾರೆ ಎನ್ನುವ ಅನುಭವವಾಗಿದೆ. ಇಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದರು.

ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ಮಾತನಾಡಿ, 2025ರ ಶಿವಾಜಿ ಮಹಾರಾಜರ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗುವುದು. ನಗರದಲ್ಲಿ ನಡೆಯುವ ಶಿವಾಜಿ ಜಯಂತ್ಯುತ್ಸವ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ಹಿಂದೂಗಳು ತಮ್ಮ ಜಾತಿಯನ್ನು ಬದಿಗೊತ್ತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಿಂದೂ ಸಮಾಜವನ್ನು ಸಂಘಟಿಸುವುದು ಬಹುದೊಡ್ಡ ಸವಾಲಾಗಿದೆ. ಜಯಂತ್ಯುತ್ಸವ ನಡೆಸುವುದರಿಂದ ಹಿಂದೂಗಳು ಒಂದಾಗಲೂ ಪ್ರೇರಣೆಯಾಗಲಿದೆ ಎಂದರು.

ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಶ್ರೀರಾಮ ಸೇನಾ ಸಂಘಟನೆಯ ಯುವಕರು, ಹಿಂದೂ ಯುವಕರು ಸಂಘಟನೆಯ ಬಗ್ಗೆ ಕಳಕಳಿ ಹೊಂದಬೇಕು. ಜಯಂತ್ಯುತ್ಸವ ಅದ್ದೂರಿಯಾಗಿ ನಡೆಯಲು ಯುವಕರ ಪಾತ್ರ ಮಹತ್ವದ್ದಾಗಿದೆ. ನಗರದಲ್ಲಿ ಸಾವಿರಾರು ಸಂಘಟನೆಗಳಿವೆ. ಅದರಲ್ಲಿ ಶ್ರೀರಾಮ ಸೇನಾ ಸಂಘಟನೆಗೆ ವಿಶೇಷವಾದ ಶಕ್ತಿ ಇದೆ. ಆಟೋ ಸೇನಾ ಪ್ರತಿಯೊಬ್ಬ ಕಾರ್ಯಕರ್ತರು ಗಣವೇಷದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಹಿAದೂಗಳನ್ನು ಒಗ್ಗೂಡಿಸಿ ಧರ್ಮ ರಕ್ಷಣೆ ಮಾಡುವ ಅವಶ್ಯಕತೆ ಇದೆ. ಹಿಂದೂತ್ವಕ್ಕಾಗಿ ಹೋರಾಡುವ ಪ್ರತಿಯೊಬ್ಬರೂ ತೆರೆದ ಪುಸ್ತಕದಂತೆ ಇರಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಪ್ರತಿ ವರ್ಷ ಸಂಘಟಕರು ವ್ಯಕ್ತಿಯ ಸಾಮಾಜಿಕ ಕಾರ್ಯಕ್ರಮ ಗುರುತಿಸಿ ಜಯಂತ್ಯುತ್ಸವದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ನನ್ನನ್ನು 2024ರಲ್ಲಿ 7ನೇ ವರ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಾರಿಯಾಗಿದ್ದೇನೆ. 7ನೇ ವರ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸವಿನೆನಪಿಗಾಗಿ ಗೋಶಾಲೆ ಹಾಗೂ ಪಾಠಶಾಲೆ ನಿರ್ಮಿಸಲು ವಿಶೇಷ ಸೇವೆಯನ್ನು ದೇಣಿಗೆ ರೂಪದಲ್ಲಿ ಹಂತ-ಹಂತವಾಗಿ ನೀಡುತ್ತೇನೆ.

– ಜಗದೀಶ್ ಎಸ್.ಪಿ.

ನಿಕಟಪೂರ್ವ ಅಧ್ಯಕ್ಷರು,

ಜಯಂತ್ಯುತ್ಸವ ಸಮಿತಿ-2024

2016ರಿಂದ ಶಿವಾಜಿ ಜಯಂತಿ ಆರಂಭ ಮಾಡಲಾಯಿತು. ಪ್ರಥಮ ವರ್ಷ ಹುಬ್ಬಳ್ಳಿಯಿಂದ ಶಿವಾಜಿ ಮೂರ್ತಿ ತರಲಾಯಿತು. ಅಂದು ರಾಜು ಡಂಬಳ ಅವರು ಒಂದು ರೂ ಪಡೆಯದೇ ಡಿಜೆ ಸೇವೆ ಮಾಡಿದರು. 2017ರಲ್ಲಿ ಯಥಾ ಸ್ಥಿತಿ ಮುಂದುವರೆಯಿತು. 2018ರಿಂದ 2024ರವರೆಗೆ ಉತ್ಸವವು ಅದ್ದೂರಿಯಾಗಿ ನಡೆದುಕೊಂಡು ಬಂದು ಆರ್ಥಿಕವಾಗಿ ಬಲಿಷ್ಠವಾಗಿ, ಸಂಘಟನೆಯಿಂದ ಜಾಗ ಖರೀದಿ ಮಾಡಲಾಗಿದೆ. ಇದು ನಮ್ಮ ಸಂಘಟನೆಯ ಶಕ್ತಿ.

– ಸೋಮು ಗುಡಿ.

ಜಿಲ್ಲಾಧ್ಯಕ್ಷರು, ಶ್ರೀರಾಮ ಸೇನಾ.


Spread the love

LEAVE A REPLY

Please enter your comment!
Please enter your name here