ತುಮಕೂರು: ಕೆಲ ಸಂದರ್ಭದಲ್ಲಿ ನನ್ನ ದುರಹಂಕಾರದಿಂದ ನನಗೆ ತೊಂದರೆ ಆಗಿದೆ. ಕೆಲ ವೇಳೆ ನಾನು ಮಾಡಿದ ತೀರ್ಮಾನ ನನಗೆ ತೊಂದರೆ ಕೊಟ್ಟಿದೆ. ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತೆ ಆಗಿದೆ. ಅದನ್ನು ಒರೆಸಿಕೊಂಡು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದ್ದಾರೆ.
Advertisement
ಗುರುಭವನ ಲೋಕಾರ್ಪಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ನಡವಳಿಕೆ ಬೇರೆಯವರಿಗೆ ಹೋಲಿಸಬೇಡಿ. ನಾನು ಒಂದಕ್ಕೆ ಅಂಟಿಕೊಂಡವನಲ್ಲ. ನನ್ನ ಅರ್ಹತೆ ಪಕ್ಷ ಗುರುತಿಸಿದ್ಯೋ ಇಲ್ಲವೋ ಎನ್ನುವುದನ್ನು ಈಗ ಮಾತನಾಡಲ್ಲ. ಆದರೆ ಒಂದಂತು ಸತ್ಯ. ಅರ್ಹತೆಗೆ ಈ ರೀತಿಯ ಮಾನದಂಡ ಆಗಬಾರದು. ಅರ್ಹತೆ ಅವಕಾಶ ವಂಚಿತ ಆಗಬಾರದು ಎಂದರು.