ಗದಗ:- ಟಿಕೆಟ್ ನೀಡಲು ಸಾರಿಗೆ ಬಸ್ ನಿಲ್ಲಿಸಿದ ಕಂಡಕ್ಟರ್ ಮೇಲೆ ಹಲ್ಲೆ ನಡೆದಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿಯ ಹೊರ ವಲಯದಲ್ಲಿ ಜರುಗಿದೆ.
ಶಿರಹಟ್ಟಿಯಿಂದ ಲಕ್ಷ್ಮೇಶ್ವರ ಕಡೆಗೆ ಬಸ್ ಹೊರಟಿತ್ತು. ಬಸ್ ಗದ್ದಲ ಇದ್ದ ಕಾರಣ ಶಿರಹಟ್ಟಿ ಹೊರ ವಲಯದಲ್ಲಿ ಬಸ್ ನಿಲ್ಲಿಸಲು ಕಂಡಕ್ಟರ್ ಕೃಷ್ಣಾ ನಾಯಕ್ ಅವರು ಡ್ರೈವರ್ ಗೆ ಸೂಚಿಸಿದ್ದರು.
ಈ ವೇಳೆ ಮೂವರು ದುಷ್ಕರ್ಮಿಗಳು, ಡ್ರೈವರ್- ಕಂಡೆಕ್ಟರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಬೇಗ ಹೋಗ್ಬೇಕು.. ಇಲ್ಲಿ ಏಕೆ ಬಸ್ ನಿಲ್ಲಿಸಿದ್ದಿಯಾ ಅಂತಾ ತಗಾದೆ ತೆಗೆದಿದ್ದಾರೆ.
ಅಷ್ಟೇ ಅಲ್ಲದೇ ಏಕಾ ಏಕಿ ಕಂಡಕ್ಟರ್ ಕೃಷ್ಣಾ ನಾಯಕ್ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ಜಗಳ ಬಿಡಿಸಲು ಬಂದ ಬಸ್ ಡ್ರೈವರ್ ಮೇಲೂ ಮನಬಂದಂತೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.
ಹಲ್ಲೆ ಬಳಿಕ ದುಷ್ಕರ್ಮಿಗಳು ನಾಪತ್ತೆಯಾಗಿದ್ದು, ಗಾಯಾಳು ಕೃಷ್ಣಾ ನಾಯಕ್ ಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.