ಜನರ ವಿಶ್ವಾಸ ಸಂತಸ ತಂದಿದೆ

0
anandaswamy
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ಕಟ್ಟಡದ ಮತಗಟ್ಟೆ ಸಂಖ್ಯೆ-109ರಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು.

Advertisement

ಇವರೊಂದಿಗೆ ತಂದೆ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ತಾಯಿ ಜಯಲಕ್ಷ್ಮಿ ಗಡ್ಡದೇವರಮಠ, ಪತ್ನಿ ದೀಪಾ ಮತ್ತು ಪುತ್ರಿ ಚಿನ್ಮಯಿ ಮತದಾನ ಮಾಡಿದರು. ಮತದಾನದ ಬಳಿಕ ಮಾತನಾಡಿದ ಆನಂದಸ್ವಾಮಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಪೂರಕವಾದ ವಾತಾವರಣ, ಒಲವು ಕಂಡು ಬಂದಿದೆ. ಸರ್ಕಾರದ ಗ್ಯಾರಂಟಿ ಯೋಜನೆ ಮತ್ತು ಉತ್ತಮ ಕಾರ್ಯಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ.

ಪ್ರಚಾರದ ವೇಳೆ ಕ್ಷೇತ್ರದಾದ್ಯಂತ ಜನರು ತೋರಿದ ಪ್ರೀತಿ-ವಿಶ್ವಾಸ ಸಂತಸ ತಂದಿದೆ ಎಂದರು.

ಮತದಾನಕ್ಕೂ ಪೂರ್ವದಲ್ಲಿ ಆರಾಧ್ಯದೈವ ಶ್ರೀ ಸೋಮೇಶ್ವರ ದೇವಸ್ಥಾನ, ಗಡ್ಡದೇವರಮಠ, ಶಿವರುದ್ರಮ್ಮದೇವಿ ದೇವಸ್ಥಾನ, ದೂದಪೀರಾಂ ದರ್ಗಾ ಸೇರಿ ವಿವಿಧ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಬಳಿಕ ಪಕ್ಷದ ಹಿರಿಯರ ಆಶೀರ್ವಾದ ಪಡೆದರು. ಮತದಾನದ ನಂತರ ಗದಗ-ಹಾವೇರಿ ಭಾಗದಲ್ಲಿ ಸಂಚರಿಸಿದರು.


Spread the love

LEAVE A REPLY

Please enter your comment!
Please enter your name here