HomeGadag Newsರಂಗಭೂಮಿಗೆ ಪುರಾಣಿಕಮಠರ ಕೊಡುಗೆ ಅಪಾರ

ರಂಗಭೂಮಿಗೆ ಪುರಾಣಿಕಮಠರ ಕೊಡುಗೆ ಅಪಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ ಆರ್.ಎಫ್. ಪುರಾಣಿಕಮಠರ ಹೆಸರು ಚಿರಸ್ಥಾಯಿಯಾಗಿದ್ದು, ಜೀವನದುದ್ದಕ್ಕೂ ವೃತ್ತಿರಂಗಭೂಮಿ, ಸಿನಿಮಾ ಪ್ರದರ್ಶನ, ಸಮಾಜ ಸೇವೆ ಮುಂತಾದ ಸೇವಾ ಕಾರ್ಯಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅಭಿಪ್ರಾಯಪಟ್ಟರು.

ಅವರು ಲಕ್ಷ್ಮೇಶ್ವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗಂಗಾಧರಯ್ಯ ಪುರಾಣಿಕಮಠ ಅವರ ಸ್ವಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರಂಗಭೂಮಿ, ಸಿನೇಮಾ ಪ್ರಪಂಚದಲ್ಲಿ ಕನ್ನಡದ ವರನಟ ಡಾ. ರಾಜಕುಮಾರ, ಬಾಲಕೃಷ್ಣ, ಪಂಡರಿಬಾಯಿಯಂತ ಶ್ರೇಷ್ಠ ನಟ-ನಟಿಯರು ಇವರನ್ನು ಅತ್ಯಂತ ಗೌರವಭಾವದಿಂದ ಕಾಣುತ್ತಿದ್ದರು. ಇದಕ್ಕೆ ಅವರಲ್ಲಿದ್ದ ಸೇವಾ ಮನೋಭಾವ ಮತ್ತು ಕಲೆಗೆ ನೀಡುತ್ತಿದ್ದ ಗೌರವ ಕಾರಣವಾಗಿದೆ ಎಂದು ಹೇಳಿದರು.

`ವೃತ್ತಿ ರಂಗಭೂಮಿಗೆ ಆರ್.ಎಫ್. ಪುರಾಣಿಕಮಠ ಅವರ ಕೊಡುಗೆ’ ವಿಷಯದ ಮೇಲೆ ಹಿರಿಯ ಸಾಹಿತಿ ಸಿ.ಜಿ. ಹಿರೇಮಠ ಉಪನ್ಯಾಸ ನೀಡಿ, 60-70ರ ದಶಕದಲ್ಲಿ ಈ ಭಾಗದಲ್ಲಿ ವೃತ್ತಿರಂಗ ಭೂಮಿಯನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದ ಕೀರ್ತಿ ಆರ್.ಎಫ್. ಪುರಾಣಿಕಮಠರಿಗೆ ಸಲ್ಲುತ್ತದೆ. ರವಿ ಕಲಾ ನಾಟ್ಯ ಸಂಘ ಎಂಬ ನಾಟಕ ಕಂಪನಿಯ ಮಾಲಕರಾಗಿ, ಪೋಷಕರಾಗಿ ಕಲಾವಿದರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಿದವರು. ಉಮಾಶ್ರೀಯಂತಹ ಹಿರಿಯ ಕಲಾವಿದರು ಇವರನ್ನು ಇಂದಿಗೂ ನೆನೆಯುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಹಾಬಳೇಶ್ವರಪ್ಪ ಬೇವಿನಮರದ, ಬಿ.ಎಸ್. ಬಾಳೇಶ್ವರಮಠ ಮಾತನಾಡಿದರು. ಪ್ರತಿಮಾ ಮಹಾಜನಶೆಟ್ಟರ ಗೀತವಂದನ ಕಾರ್ಯಕ್ರಮ ನಡೆಸಿಕೊಟ್ಟರು.

ಲಕ್ಷ್ಮೇಶ್ವರ ತಾಲೂಕಾ ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಯ್ಯ ಪುರಾಣಿಕಮಠ, ಜಗದೀಶ ಪುರಾಣಿಕಮಠ, ಗಂಗಾಧರಯ್ಯ ಪುರಾಣಿಕಮಠ, ವಾಗೀಶ ಪುರಾಣಿಕಮಠ ವೇದಿಕೆಯಲ್ಲಿದ್ದರು.

ಪ್ರಭಾವತಿ ಪುರಾಣಿಕಮಠ ಪ್ರಾರ್ಥಿಸಿದರು. ವಿಶ್ರಾಂತ ಶಿಕ್ಷಕ ಐ.ಎ. ಬಳಿಗಾರ ಸ್ವಾಗತಿಸಿದರು. ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ನಿರೂಪಿಸಿದರು. ಗಂಗಾಧರಯ್ಯ ಪುರಾಣಿಕಮಠ ವಂದಿಸಿದರು. ನಾಗರಾಜ ಮಜ್ಜಿಗುಡ್ಡ, ಎಸ್.ಬಿ. ಅಣ್ಣಿಗೇರಿ, ಪಿ.ಎಚ್. ಕೊಂಡಾಬಿಂಗಿ, ಎನ್.ಪಿ. ಪ್ಯಾಟಿಗೌಡ್ರ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಚಂಬಣ್ಣ ಬಾಳಿಕಾಯಿ, ಮಲ್ಲಿಕಾರ್ಜುನ ಕಳಸಾಪುರ, ರಮೇಶ ನವಲೆ, ಎನ್.ಆರ್. ಸಾತಪುತೆ, ಸರೋಜಾ ಪುರಾಣಿಕಮಠ, ಸುನಂದ ಪುರಾಣಿಕಮಠ, ಸರೋಜಕ್ಕ ಬನ್ನೂರು, ಶಾರಕ್ಕ ಮಹಾಂತಶೆಟ್ಟರ, ಸುರೇಶ್ ಕೊಡ್ಲಿ, ನಿರ್ಮಲ ಅರಳಿ, ಮಾಲಾದೇವಿ ದಂದರಗಿ, ಪಾಪು ಬಾಳಿಹಳ್ಳಿಮಠ, ರತ್ನಾ ಕರ್ಕಿ, ಬೇಬಿ ರುದ್ರಶೆಟ್ಟರ, ಜೆ.ಡಿ. ಲಮಾಣಿ, ಮೃತ್ಯುಂಜಯ ಹಿರೇಮಠ, ಎಂ.ಕೆ. ಕಳ್ಳಿಮಠ, ಈರಣ್ಣ ಅಂಕಲಕೋಟಿ, ಸಚಿನ್ ಮಠದ, ರಾಜು ಉಮಚಗಿ, ಮುತ್ತುರಾಜ ಪೂಜಾರ, ಮುರುಳಿಧರ ಹುಬ್ಬಳ್ಳಿ ಮುಂತಾದವರಿದ್ದರು.

ದಿ ಆರ್.ಎಫ್. ಪುರಾಣಿಕಮಠ ಅವರ ಧರ್ಮಪತ್ನಿ ಪಾರ್ವತೆಮ್ಮ ಮಾತನಾಡಿ, ಜೀವನದುದ್ದಕ್ಕೂ ಕಲೆ, ಕಲಾವಿದರಿಗಾಗಿ ಮಿಡಿಯುವ ವ್ಯಕ್ತಿತ್ವ ಅವರದಾಗಿತ್ತು. ಕನ್ನಡ ಸಿನಿಮಾ ಕ್ಷೇತ್ರದ ಬಹುತೇಕ ಎಲ್ಲಾ ದೊಡ್ಡ ಕಲಾವಿದರನ್ನು ಲಕ್ಷ್ಮೇಶ್ವರಕ್ಕೆ ಕರೆಸಿ ಗೌರವವಿಸಿದ್ದರು ಎಂದು ತಮ್ಮ ಪತಿಯ ಸೇವೆಯನ್ನು ನೆನಪಿಸಿಕೊಂಡರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!