HomeGadag Newsಸಾಂಸ್ಕೃತಿಕ ಭಾರತಕ್ಕೆ ನೇಕಾರರ ಕೊಡುಗೆ ಅಪಾರ

ಸಾಂಸ್ಕೃತಿಕ ಭಾರತಕ್ಕೆ ನೇಕಾರರ ಕೊಡುಗೆ ಅಪಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಮ್ಮ ಕರಕುಶಲತೆಯ ಮೂಲಕ ವಿಶಿಷ್ಟ ಉಡುಗೆ-ತೊಡುಗೆಯ ಉತ್ಪನ್ನಗಳನ್ನು ತಯಾರಿಸುವ ನೇಕಾರರು ಭಾರತದ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಮೂಲಕ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಹೇಳಿದರು.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬೆಟಗೇರಿ ಈರಣ್ಣ ಕೊನಾ ಕೈಮಗ್ಗ ಆವರಣದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

1905ರಲ್ಲಿ ಸ್ವದೇಶಿ ಚಳುವಳಿ ಪ್ರೇರಣೆಯಿಂದ ದೇಶದಾದ್ಯಂತ ಸ್ಥಾಪನೆಯಾದ ಕೈಮಗ್ಗ ವಲಯವು ಇಂದು ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮವಾಗಿ ರೂಪಗೊಂಡಿದ್ದಕ್ಕೆ ನೇಕಾರರ ಶ್ರಮ, ಶೃದ್ಧೆಯೇ ಕಾರಣ. ಶ್ರಮಶೀಲ ನೇಕಾರರ ಜೀವನ ಶೈಲಿ ಹಾಗು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಿಂದ ತಂತ್ರಜ್ಞಾನ ನೆರವು, ರಫ್ತು, ಇ-ಮಾರ್ಕೆಟಿಂಗ್, ವಿನ್ಯಾಸ ಇನ್‌ಪುಟ್, ಮಾರುಕಟ್ಟೆ ನೆರವು ಮುಂತಾದವುಗಳಿಂದ ಇಂದು ಕೈಮಗ್ಗ ವಲಯವು ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ಮಾತನಾಡಿ, ಸ್ಥಳೀಯವಾಗಿ ತಯಾರಿಸಲ್ಪಟ್ಟ ಕೈಮಗ್ಗ ಉತ್ಪನ್ನಗಳನ್ನ ಖರೀದಿಸುವ ಮೂಲಕ ನೇಕಾರರ ಕೌಶಲ್ಯ, ಉದ್ಯಮದ ಬೆಳವಣಿಗೆಗೆ ನಾವು ಉತ್ತೇಜನ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ವಿಶಿಷ್ಟ ಸಾಧನೆಗಾಗಿ ಕೈಮಗ್ಗ ಉದ್ಯಮಿ ರಾಜೇಶ್ವರಿ ಕೊನಾ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಹಿರಿಯರಾದ ಜಗನ್ನಾಥಸಾ ಬಾಂಡಗೆ, ಶಂಕರ ಕಾಕಿ, ದೇವೇಂದ್ರಪ್ಪ ಗೋಟೂರ, ವಿಜಯಲಕ್ಷ್ಮೀ ಮಾನ್ವಿ, ಪ್ರೀತಿ ಹೊನಗುಡಿ ಮಾತನಾಡಿದರು.

ನಗರಸಭಾ ಸದಸ್ಯರಾದ ಮಾಧುಸಾ ಮೇರವಾಡೆ, ವಿದ್ಯಾವತಿ ಗಡಗಿ, ಮುಖಂಡರಾದ ವಂದನಾ ವರ್ಣೇಕರ, ನರಸಿಂಗ ಮೇರವಾಡೆ, ಈರಣ್ಣ ಕೋನ, ರಾಜೇಶ್ವರಿ ಕೋನ, ಸುಧಾ ಮೇರವಾಡೆ, ಸ್ವಾತಿ ಅಕ್ಕಿ, ರಮೇಶ ಸಜ್ಜಗಾರ, ಅಮರನಾಥ ಗಡಗಿ, ರವಿ ಮಾನ್ವಿ, ದೇವೇಂದ್ರಪ್ಪ ಹೂಗಾರ ಮುಂತಾದವರು ಪಾಲ್ಗೊಂಡಿದ್ದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಬಹುರಾಷ್ಟಿçÃಯ ಕಂಪನಿಗಳ ಊತ್ಪನ್ನಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುವ ಪರಿಪಾಠವನ್ನ ಬಿಟ್ಟು ಗುಣಮಟ್ಟದ ದೇಶೀಯ ಬಟ್ಟೆಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!