ಶ್ರೀ ಶರಣ ಬಸವೇಶ್ವರರ ತೊಟ್ಟಿಲೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಹಾಗೂ ಶ್ರೀ ಕಟ್ಟಿ ಬಸವೇಶ್ವರ ದೇವಸ್ಥಾನದ ಸಹಯೋಗದಲ್ಲಿ ಮಾರ್ಚ್ 16ರಿಂದ 30ರವರೆಗೆ ಶ್ರೀ ಮಹಾದಾಸೋಹಿ ಕಲಬುರಗಿ ಶರಣ ಬಸವೇಶ್ವರರ 47ನೇ ವರ್ಷದ ಪುರಾಣ ಪ್ರಾರಂಭೋತ್ಸವ ಧಾರ್ಮಿಕ ಸಮಾರಂಭ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಶ್ರೀ ಶರಣ ಬಸವೇಶ್ವರ ತೊಟ್ಟಿಲು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

Advertisement

ವೇ.ಮೂ. ಬಸಯ್ಯ ಶಾಸ್ತ್ರಿಗಳು ಹಿರೇಮಠ ಪ್ರವಚನ, ಜಗನ್ನಾಥ ಶಿಂದಗಿ ಸಂಗೀತ ಹಾಗೂ ಅಪ್ಪಣ್ಣ ಕುಡತಿನಿ ತಬಲಾ ಸೇವೆ ನೀಡಿದರು. ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನರಂಗಪ್ಪ ಹೂಗಾರ, ಶಂಭುಲಿಂಗಪ್ಪ ವಿ.ಕಾರದಕಟ್ಟಿ, ಭೀಮರೆಡ್ಡಿ ಕಿಲಬನವರ, ಸಂತೋಷ ಕುಡತರಕರ, ನರಸಿಂಹ ಕುಡತರಕರ, ಈಶ್ವರಪ್ಪ ಗಡಾದ, ನಿರ್ಮಲಾ ಕರಸಿದ್ದಿಮಠ, ನಾಗಪ್ಪ ಗಡಾದ, ಮುತ್ತು ಕಾರದಕಟ್ಟಿ, ಪುರಾಣ ಸಮಿತಿಯ ಅಧ್ಯಕ್ಷ ಮಾರುತಿ ಮದಗುಣಕಿ, ಉಪಾಧ್ಯಕ್ಷ ಶಿವನಗೌಡ ಆಡೂರ, ಕಿರಣ ಎಸ್.ಗಡಾದ, ಕಾರ್ಯದರ್ಶಿ ವೀರೇಂದ್ರ ಮಣ್ಣನವರ, ಕಾರ್ಯಕ್ರಮದ ಆಯೋಜಕ ಗಂಗಾಧರ ಗಡಾದ, ಶಂಕರ ಗಡಾದ ಹಾಗೂ ಸದ್ಬಕ್ತರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here