ಬೆಂಗಳೂರು:- ಬಿಎಂಟಿಸಿ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಬಂಕ್ ಸಿಗ್ನಲ್ ನಲ್ಲಿ ಜರುಗಿದೆ.
Advertisement
ಸಿಗ್ನಲ್ ಬಿಡುತ್ತಿದ್ದಂತೆ ಬಸ್ ಹತ್ತಲು ಮಹಿಳೆ ಓಡಿದ್ದಾಳೆ. ಈ ವೇಳೆ ಎಡವಿ ಬಿಎಂಟಿಸಿಯ ಹಿಂದಿನ ಚಕ್ರಕ್ಕೆ ಮಹಿಳೆ ಸಿಲುಕಿದ್ದಾರೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಸ್ ರಾತ್ರಿಪಾಳಿ ಮುಗಿಸಿ ಹೊರಟಿದ್ದ ವೇಳೆ ಇಂದು ಸರಿಸುಮಾರು 8.45ಕ್ಕೆ ಘಟನೆ ಸಂಭವಿಸಿದೆ. ಘಟನೆ ಸಂಬಂಧ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.