HomeGadag Newsಇಲಾಖೆಯ ಒತ್ತಡದ ಕೆಲಸಗಳು ಹೆಚ್ಚಾಗಿವೆ

ಇಲಾಖೆಯ ಒತ್ತಡದ ಕೆಲಸಗಳು ಹೆಚ್ಚಾಗಿವೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಿಎಲ್‌ಓ ಕಾರ್ಯದಿಂದ ಶಿಕ್ಷಕರನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಪಟ್ಟಣದ ತಹಸೀಲ್ದಾರ ಕಚೇರಿಗೆ ತೆರಳಿ ಗ್ರೇಡ್-2 ತಹಸೀಲ್ದಾರ ಮಂಜುನಾಥ್ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ ಮತ್ತು ಕಾರ್ಯದರ್ಶಿ ಚಂದ್ರಕಾಂತ ನೇಕಾರ ಮಾತನಾಡಿ, ಕಂದಾಯ ಇಲಾಖೆ ನೀಡುವ ಚುನಾವಣೆ ಮತ್ತು ಇತರೆ ಕಾರ್ಯಗಳನ್ನು ಶಿಕ್ಷಕರು ಚಾಚೂ ತಪ್ಪದೇ ಮಾಡುತ್ತಿದ್ದಾರೆ. ಆದರೆ ಈಗ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ಒತ್ತಡದ ಕೆಲಸಗಳು ಹೆಚ್ಚಾಗಿವೆ. ಶಾಲೆಗಳು ಆರಂಭಗೊಂಡಿದ್ದು, ಶಿಕ್ಷಕರು ಇದರಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕಿದೆ. ಅಲ್ಲದೆ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆಯೂ ಸಾಕಷ್ಟಿದೆ. ಇತರೆ ಇಲಾಖೆಯ ಕೆಲಸಗಳಿಂದ ಬೋಧನೆಗೆ ಸಮಯವೇ ಸಿಗುತ್ತಿಲ್ಲ. ಇದು ಮಕ್ಕಳ ಪಾಠದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸುವದಾಗಿ ಹೇಳಿದರು. ಈ ವೇಳೆ ಕ.ರಾ.ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಪ್ರ. ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಬಿ.ಎಂ. ಕುಂಬಾರ, ಬಿ.ಬಿ. ಯತ್ತಿನಹಳ್ಳಿ, ಶ್ರೀಕಾಂತ ನಂದೆಣ್ಣವರ, ಎಮ್.ಎ. ನದಾಫ್, ಗೀತಾ ಹಳ್ಯಾಳ, ಬಿ.ಎಮ್. ಯರಗುಪ್ಪಿ, ಸತೀಶ ಬೊಮಲೆ, ಉಮೇಶ ನೇಕಾರ, ಪಿ.ಸಿ. ಕಾಳಶೆಟ್ಟಿ, ಡಿ.ಎಲ್. ಪಾಟೀಲ, ಎಸ್.ಎನ್. ಕ್ಷತ್ರಿಯ, ಎಸ್.ಎಮ್. ತಾಯಮ್ಮನವರ, ಪಿ.ಪಿ. ಹಿರೇಮಠ, ಎಸ್.ವಿ. ಸೋಗಿ, ಎಲ್.ಆರ್. ಮಲಸಮುದ್ರ, ಎನ್.ಎಸ್. ಬಂಕಾಪೂರ, ಎನ್.ಎಸ್. ಪಾಟೀಲ, ಎಮ್.ಪಿ. ಹರ್ಲಾಪೂರ, ಎಸ್.ಎಸ್. ಪಾಟೀಲ, ವಿ.ಎಸ್. ಹಿರೇಮಠ, ಪಿ.ಎಮ್. ಆಡ್ನೂರ, ರಾಜೇಶ್ವರಿ ಅಡರಕಟ್ಟಿ, ಸಿ.ಎಫ್. ಪಾಟೀಲ, ಶ್ರೀನಿವಾಸ್ ಹಾಗೂ ತಾಲೂಕಿನ ಶಿಕ್ಷಕರು ಹಾಜರಿದ್ದರು.

ಶಿಕ್ಷಕರು ಪತ್ರಿನಿತ್ಯ ಒಂದಿಲ್ಲೊಂದು ಸಭೆಗಳಿಗೆ ಹಾಜರಾಗುವುದು, ಮತದಾರರ ಚೀಟಿಗೆ ಆಧಾರ್ ಲಿಂಕ್ ಮಾಡುವುದು, ಮತದಾರರ ಸೇರ್ಪಡೆ, ತೆಗೆದು ಹಾಕುವಿಕೆ, ತಿದ್ದುಪಡಿ ಇತರ ಬಹಳಷ್ಟು ಕೆಲಸಗಳಿರುವುದರಿಂದ ಒತ್ತಡಕ್ಕೆ ಸಿಲುಕುವಂತಾಗಿದೆ. ಬೋಧನೆ ಮತ್ತು ಬಿಎಲ್‌ಓ ಎರಡೂ ಕೆಲಸಗಳನ್ನು ಸಮರ್ಪಕವಾಗಿ ಮಾಡುವದು ಬಹುತೇಕ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಕಾರಣ ಶಿಕ್ಷಕರನ್ನು ಈ ಕೆಲಸದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!