‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಬಿಡುಗಡೆ ಮೇ.19ಕ್ಕೆ

0
'The Difficulty of Building Villages'
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಖ್ಯಾತ ಸಮಾಜ ವಿಜ್ಞಾನಿ ಡಾ. ಪ್ರಕಾಶ ಭಟ್ ಅವರ ಮಹತ್ವದ ಕೃತಿ, ‘ಬಹುರೂಪಿ’ಯ ಪ್ರಕಟಣೆ ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಬಿಡುಗಡೆಯನ್ನು ಮೇ 19ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

Advertisement

ಬೆಂಗಳೂರಿನ ‘ಬಹುರೂಪಿ’ ಹಾಗೂ ಸೂರಶೆಟ್ಟಿಕೊಪ್ಪದ `ಸರ್ವೋದಯ ಮಹಾಸಂಘ’ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹಳ್ಳಿಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲಿ ಹೊಸ ಕಾಣ್ಕೆಯನ್ನು ನೀಡುವ ಕೃತಿ ಇದು. ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಹಾಗೂ ಶಿರಸಿ ತಾಲೂಕಿನ ದಾಸನಕೊಪ್ಪದ ೫೦ ಹಳ್ಳಿಗಳು ಹೊಸ ಬೆಳಕಿನತ್ತ ಹೆಜ್ಜೆ ಹಾಕಿದ ಕಥನ ಇದು. ಈ ಕೃತಿಯನ್ನು ಈ ಹಳ್ಳಿಗಳವರೇ ಬಿಡುಗಡೆಗೊಳಿಸುತ್ತಿದ್ದಾರೆ ಎನ್ನುವುದು ವಿಶೇಷ ಎಂದು ಬಹುರೂಪಿಯ ಸ್ಥಾಪಕರಾದ ಶ್ರೀಜಾ ವಿ.ಎನ್. ಹಾಗೂ ಸರ್ವೋದಯ ಮಹಾಸಂಘದ ರೇಣಪ್ಪಗೌಡ ಭಾವಿಕಟ್ಟಿ ತಿಳಿಸಿದ್ದಾರೆ.

ಖ್ಯಾತ ವಿಜ್ಞಾನ ಅಂಕಣಕಾರ, ಸಾಹಿತಿ ಹಾಗೂ ಹಳ್ಳಿಗಳ ಈ ಮಾರ್ಪಾಟನ್ನು ಸ್ವತಃ ಕಂಡ ನಾಗೇಶ ಹೆಗಡೆ ಅವರು ಈ ಕೃತಿಯ ವಿಶೇಷತೆಯ ಬಗ್ಗೆ ಮಾತನಾಡಲಿದ್ದಾರೆ. ನಂತರ, ಡಾ. ಪ್ರಕಾಶ ಭಟ್ ಅವರೊಂದಿಗೆ ಸಂವಾದ ಜರುಗಲಿದೆ. ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಆಂಧ್ರ ಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ತೇಜಸ್ವಿ ಕಟ್ಟಿಮನಿ, ಹಿರಿಯ ಸಾಹಿತಿ, ಶಿಕ್ಷಣ ತಜ್ಞ ಡಾ. ಬಿಳಿಗೆರೆ ಕೃಷ್ಣಮೂರ್ತಿ ಅವರು ಸಂವಾದದಲ್ಲಿ ಭಾಗವಹಿಸುತ್ತಾರೆ. ಸುನಂದಾ ಪ್ರಕಾಶ್ ಅವರು ಈ ಇಡೀ ಹಳ್ಳಿ ಕಟ್ಟುವ ಪ್ರಕ್ರಿಯೆಗೆ ಪ್ರತಿಕ್ರಿಯಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸೂರಶೆಟ್ಟಿಕೊಪ್ಪ ಹಾಗೂ ದಾಸನಪುರದ ಹಲವಾರು ಗ್ರಾಮಸ್ಥರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here