ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಸಾರ್ವಜನಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.
ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌದ್ರಿ ವಹಿಸಿದ್ದರು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ನೇತೃತ್ವವನ್ನು ಆರ್.ಎಸ್.ಎ ಚನ್ನಪ್ಪ ಕೆರೂರ ವಹಿಸಿದ್ದರು.
ನಾಗರಿಕ ಪೊಲೀಸ್ ಪಡೆಯ ನೇತೃತ್ವವನ್ನು ನಿಸ್ತಂತು ಘಟಕದ ಪಿಎಸ್‌ಐ ಕಾಳಪ್ಪ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಲೋಕೇಶ ಎಫ್.ಎಸ್.ಒ, ಅಬಕಾರಿ ದಳದ ನೇತೃತ್ವವನ್ನು ಆಶಾ ರಾಣಿ, ಅರಣ್ಯ ರಕ್ಷಕ ಪಡೆಯ ನೇತೃತ್ವವನ್ನು ಡೆಪ್ಯೂಟಿ ಆರ್.ಎಫ್.ಓ ಸಚಿನ ಬಿಸನಳ್ಳಿ, 38 ಕೆಎಆರ್ ಬಟಾಲಿನ್ ಗದಗನ ನೇತೃತ್ವವನ್ನು ಕುಮಾರ್ ಪ್ರಸನ್ನ, 38 ಕೆಎಆರ್ ಬಟಾಲಿಯನ್ ಗದಗದ ನೇತೃತ್ವವನ್ನು ಅಭಿಲಾಷಾ, ನಗರದ ಎಸ್.ಎಂ. ಕೃಷ್ಣಾ ನಗರದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ನೇತೃತ್ವವನ್ನು ಅಂಜನಾ, ವಿ.ಡಿ.ಎಸ್.ಟಿ.ಸಿ. ಬಾಲಕಿಯರ ಪ್ರೌಢಶಾಲೆಯ ನೇತೃತ್ವವನ್ನು ಸಹನಾ, ಎಸ್.ಎಂ. ಕೃಷ್ಣಾ ನಗರದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ನೇತೃತ್ವವನ್ನು ಸ್ನೇಹಾ, ಮಾಜಿ ಸೈನಿಕರ ಸಂಘದ ನೇತೃತ್ವವನ್ನು ವಿಜಯ ಬಡಿಗೇರ, ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆಯ ನೇತೃತ್ವವನ್ನು ಗೀತಾ, ಬೆಟಗೇರಿಯ ಸೇಂಟ್ ಜಾನ್ ಪ್ರೌಢಶಾಲೆಯ ನೇತೃತ್ವವನ್ನು ಸೋಮಶೇಖರ, ಬಸವೇಶ್ವರ ಕನ್ನಡ ಮಾಧ್ಯಮ ಬಾಲಕರ ಪ್ರೌಢಶಾಲೆಯ ನೇತೃತ್ವವನ್ನು ಸಮರ್ಥ, ಹುಲಕೋಟಿಯ ಕೆ.ಎಚ್. ಪಾಟೀಲ ವಿದ್ಯಾಮಂದಿರದ ನೇತೃತ್ವವನ್ನು ಶಿವರಾಜ ವಹಿಸಿದ್ದರು.
ಜಿಲ್ಲಾ ಪೊಲೀಸ್ ಬ್ಯಾಂಡಿನ ಸಂಗೀತದ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ಪಡೆ, ಹೋಮ್‌ಗಾರ್ಡ್, ಅಬಕಾರಿ, ಅರಣ್ಯ ರಕ್ಷಕ ಪಡೆ, ಅಗ್ನಿ ಶಾಮಕ ದಳ, ಎನ್.ಸಿ.ಸಿ ಸೀನಿಯರ್ಸ್ ಬಾಯ್ಸ್ ಹಾಗೂ ಗರ್ಲ್ಸ, ಜನರಲ್ ಹಾಗೂ ಸೇವಾ ದಳಗಳು ಸಚಿವರಿಗೆ ಗೌರವವಂದನೆ ನೀಡಿದವು.
ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸೇರಿದಂತೆ ಇತರೆ ಗಣ್ಯರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡರು.
ಪಥ ಸಂಚಲನದಲ್ಲಿ ಪಾಲ್ಗೊಂಡ ಸಾಮಾನ್ಯ ವಿಭಾಗದ ಬೆಟಗೇರಿಯ ಸೇಂಟ್ ಜಾನ್ ಪ್ರೌಢಶಾಲೆಯು ಪ್ರಥಮ ಸ್ಥಾನ, ಭಾರತ ಸೇವಾ ದಳದ ಎಸ್.ಎಂ. ಕೃಷ್ಣಾ ನಗರದ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆಗೆ ದ್ವಿತೀಯ ಹಾಗೂ ಎನ್.ಸಿ.ಸಿ ಸೀನಿಯರ್ಸ್ ಗರ್ಲ್ಸ್ ದಳದ 38 ಕೆಎಆರ್ ಬಟಾಲಿಯನ್ ತೃತೀಯ ಸ್ಥಾನ ಪಡೆದವು.