ವೈದ್ಯರ ಎಡವಟ್ಟು: ರೋಗಿ ತಲೆಗೆ ಹೊಲಿಗೆ ಹಾಕಿ ಸೂಜಿ ಅಲ್ಲೇ ಮರೆತ ವೈದ್ಯರು- ಆಮೇಲೇನಾಯ್ತು!?

0
Spread the love

ಉತ್ತರ ಪ್ರದೇಶ:-ಉತ್ತರಪ್ರದೇಶದ ಹಾಪುರದಲ್ಲಿ ರೋಗಿಯ ತಲೆಗೆ ಹೊಲಿಗೆ ಹಾಕಿ ವೈದ್ಯರು ಸೂಜಿಯನ್ನು ಅಲ್ಲೇ ಮರೆತಿರುವ ಘಟನೆ ಜರುಗಿದೆ.

Advertisement

ಡಾಕ್ಟರ್ ಓರ್ವರು ರೋಗಿಯ ತಲೆಗೆ ಹೊಲಿಗೆ ಹಾಕಿ ಅಲ್ಲಿಯೇ ಸೂಜಿ ಮರೆತುಬಿಟ್ಟಿರುವ ಘಟನೆ ಜರುಗಿದೆ.

ಅಕ್ಕಪಕ್ಕದ ಮನೆಯವರ ನಡುವೆ ನಡೆದ ಕಲಹದಲ್ಲಿ ಸಿತಾರಾ ಎಂಬುವವರಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಸಮುದಾಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಆಕೆಯ ತಲೆಗೆ ಹೊಲಿಗೆ ಹಾಕಿದ್ದ ವೈದ್ಯರು ಸೂಜಿಯನ್ನು ಅಲ್ಲಿಯೇ ಬಿಟ್ಟು, ತಲೆಗೆ ಬ್ಯಾಂಡೇಜ್ ಮಾಡಿ ಮನೆಗೆ ಕಳುಹಿಸಿದ್ದರು.

ಮನೆಗೆ ಹಿಂದಿರುಗಿದ ಯುವತಿಗೆ ನೋವಿನಿಂದ ಕಿರುಚಾಡಲು ಶುರು ಮಾಡಿದ್ದಳು, ಕೂಡಲೇ ಆಕೆಯನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿದ್ದ ವೈದ್ಯರು ಆಕೆಯ ಬ್ಯಾಂಡೇಜ್ ತೆಗೆದು ಗಾಯದ ಮೇಲಿದ್ದ ಸೂಜಿಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಅದನ್ನು ತೆಗೆದ ಬಳಿಕ ಆಕೆಗೆ ಸ್ವಲ್ಪ ಸಮಾಧಾನವಾಗಿದೆ.

ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಪಾನಮತ್ತರಾಗಿದ್ದರು ಎಂದು ಯುವತಿಯ ತಾಯಿ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here